Ezekiel 21:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಖಡ್ಗವು ಉಜ್ಜಲ್ಪಟ್ಟಿದೆ. ಅದು ಈಗ ಉಪಯೋಗಿಸಲ್ಪಡುತ್ತದೆ. ಖಡ್ಗವು ಹರಿತಮಾಡಲ್ಪಟ್ಟು ಚೆನ್ನಾಗಿ ಉಜ್ಜಲ್ಪಟ್ಟಿದೆ. ಅದನ್ನು ಈಗ ಕೊಲ್ಲುವವನ ಕೈಯಲ್ಲಿ ಕೊಡಲಾಗುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಖಡ್ಗವು ಕೈಗೆ ಸಿಗುವಂತೆ ಮಸೆದು ಸಿದ್ಧವಾಗಿದೆ, ಘಾತಕನ ಕೈಗೆ ಈಡಾಗುವ ಹಾಗೆ ಸಾಣೆಹಿಡಿದಿದೆ, ಮಸೆದಿದೆ.
Kannada BSI Bible 2016
ಕೈಗೆ ಸಿದ್ದವಾಗುವಂತೆ ಅವನು ಅದನ್ನು ಮಸೆಯುವದಕ್ಕೆ ಕೊಟ್ಟಿದ್ದಾನೆ; ಕೊಲ್ಲುವವನ ಕೈಗೆ ಕೊಡುವ ಹಾಗೆ ಆ ಕತ್ತಿಗೆ ಹದವನ್ನೂ ಸಾಣೆಯನ್ನೂ ಮಾಡಲಾಗಿದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಖಡ್ಗವು ಕೈಗೆ ಸಿದ್ಧವಾಗುವಂತೆ ತಿಕ್ಕುವದಕ್ಕೆ ಕೊಟ್ಟಿದೆ, ಘಾತಕನ ಕೈಗೆ ಈಡಾಗುವ ಹಾಗೆ ಸಾಣೆಹಿಡಿದಿದೆ, ತಿಕ್ಕಿದೆ.
Kannada Bible (KNCL) BSI 2016
ಬಳಕೆಗೆ ಸಿದ್ಧವಿರಲೆಂದು ಕೊಡಲಾಗಿದೆ ಆ ಖಡ್ಗ ಮಸೆಯಲಿಕ್ಕೆ ಮಸೆದು, ಸಾಣೆ ಹಿಡಿದು, ಸಜ್ಜಾಗಿದೆ ಅದು ಹತ್ಯಗಾರನ ಹಿಡಿತಕ್ಕೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ ‘ಖಡ್ಗವು ಕೈಯಲ್ಲಿ ಅದು ಹಿಡಿಯಲಾಗುವ ಹಾಗೆ ಮಸೆಯಲು ಕೊಡಲಾಗಿದೆ. ಕೊಲ್ಲುವವನ ಕೈಗೆ ಕೊಡುವ ಹಾಗೆ ಆ ಖಡ್ಗಕ್ಕೆ ಹದವನ್ನೂ, ಸಾಣೆಯನ್ನೂ ಮಾಡಲಾಗಿದೆ.