Ezekiel 21:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆತನು ಹೀಗೆ ಹೇಳಿದನು: “ನರಪುತ್ರನೇ, ಕೈತಟ್ಟಿ ನನ್ನ ಪರವಾಗಿ ಜನರೊಂದಿಗೆ ಮಾತನಾಡು. “ಖಡ್ಗವು ಎರಡು ಬಾರಿ ಕೆಳಕ್ಕೆ ಹಾಕಲ್ಪಡಲಿ, ಹೌದು, ಮೂರು ಬಾರಿ! ಈ ಖಡ್ಗವು ಜನರನ್ನು ಕೊಲ್ಲುವದಕ್ಕಾಗಿಯೇ ಇದೆ. ಇದು ಮಹಾಹತ್ಯೆ ಮಾಡುವದಕ್ಕಾಗಿ ಇದೆ. ಈ ಖಡ್ಗವು ಅವರನ್ನು ತೂರಿಹೋಗುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನರಪುತ್ರನೇ, ನೀನು ದೈವೋಕ್ತಿಯನ್ನು ಸಾರಿ ಚಪ್ಪಾಳೆ ಹೊಡಿ; ಖಡ್ಗವು ಎರಡರಷ್ಟು, ಮೂರರಷ್ಟು ಸಂಹರಿಸಲಿ! ಪ್ರಜೆಯನ್ನು ಹತಿಸುವ ಖಡ್ಗ! ಸುತ್ತಲು ಬೀಸಿ, ಅಧಿಪತಿಯನ್ನು ಹತಿಸುವ ಖಡ್ಗ!
Kannada BSI Bible 2016
ಆದದರಿಂದ ಮನುಷ್ಯ ಪುತ್ರನೇ ನೀನು ಚಪ್ಪಾಳೆ ತಟ್ಟಿ ಪ್ರವಾದಿಸು; ಹತ ರಾದವರ ಕತ್ತಿಯು ಮೂರನೆಯ ಸಾರಿಯೂ ಎರಡ ರಷ್ಟು ಮಾಡಲಿ; ಅದು ತಮ್ಮ ರಹಸ್ಯ ಕೋಣೆಗಳಲ್ಲಿ ಪ್ರವೇಶಿಸಿ ಮಹಾ ಪ್ರಜೆಗಳನ್ನು ಸಂಹರಿಸಿದ ಕತ್ತಿಯೇ.
Kannada BSI JV (ಕನ್ನಡ ಸತ್ಯವೇದವು J.V. (BSI))
ನರಪುತ್ರನೇ, ನೀನು ದೈವಸಂಕಲ್ಪವನ್ನು ಸಾರಿ ಚಪ್ಪಾಳೆಬಡಿ; ಖಡ್ಗವು ಎರಡರಷ್ಟು ಮೂರರಷ್ಟು ಸಂಹರಿಸಲಿ! ಪ್ರಜೆಯನ್ನು ಹತಿಸುವ ಖಡ್ಗ! ಸುತ್ತಲು ಬೀಸಿ ಅಧಿಪತಿಯನ್ನು ಹತಿಸುವ ಖಡ್ಗ!
Kannada Bible (KNCL) BSI 2016
ನರಪುತ್ರನೇ, ಪ್ರವಾದಿಸು, ಚಪ್ಪಾಳೆ ಬಡಿ, ಹತಿಸುವುದಾ ಖಡ್ಗ ಇಮ್ಮಡಿ ಮುಮ್ಮಡಿ. ಪ್ರಜೆಯನ್ನು ಸಂಹರಿಸುವುದಾ ಖಡ್ಗ ಅಧಿಪತಿಯನ್ನೇ ಸುತ್ತಲು ಬೀಸಿ ಹತಿಸುವುದಾ ಖಡ್ಗ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಆದ್ದರಿಂದ ನೀನು ಮನುಷ್ಯಪುತ್ರನೇ, ಕೈಗೆ ಕೈತಟ್ಟಿ ಪ್ರವಾದಿಸು. ಹತರಾದವರ ಖಡ್ಗವಾದ ಆ ಖಡ್ಗವೇ ಎರಡರಷ್ಟು, ಮೂರರಷ್ಟು ಸಂಹರಿಸಲಿ. ಪ್ರಜೆಯನ್ನು ಹತಿಸುವ ಆ ಖಡ್ಗ ಸುತ್ತಲೂ ಬೀಸಿ ಆ ಕೊಠಡಿಗಳಲ್ಲಿ ಸೇರುವವರನ್ನು ಆ ದೊಡ್ಡ ಖಡ್ಗ ಸಂಹರಿಸುವುದು.