Ezekiel 21:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವರ ಹೃದಯಗಳು ಭಯದಿಂದ ಕರಗಿಹೋಗುವುದು. ಘಹು ಜನರು ಪ್ರಜ್ಞೆ ತಪ್ಪಿ ಬೀಳುವರು. ನಗರದ್ವಾರದ ಬಳಿಯಲ್ಲಿದ್ದು ಈ ಖಡ್ಗವು ಘಹು ಜನರನ್ನು ಕೊಲ್ಲುವುದು. ಹೌದು, ಖಡ್ಗವು ಮಿಂಚಿನಂತೆ ಹೊಳೆಯುವುದು. ಜನರನ್ನು ಕೊಲ್ಲುವುದಕ್ಕಾಗಿ ಅದು ಹೊಳಪುಮಾಡಲ್ಪಟ್ಟಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರ ಹೃದಯವು ನೀರಾಗಿ ಬಹಳ ಜನರು ಎಡವಿ ಬೀಳುವಂತೆ ಸಂಹರಿಸುವ ಖಡ್ಗವನ್ನು ಅವರ ಪುರದ್ವಾರಗಳಿಗೆಲ್ಲಾ ತಂದಿದ್ದೇನೆ. ಆಹಾ, ಮಿಂಚಿನಂತೆ ಮಿಂಚುತ್ತದೆ, ವಧೆಗಾಗಿ ಹಂತವಾಗಿ ಸಿದ್ಧವಾಗಿದೆ!
Kannada BSI Bible 2016
ಅವರ ಹೃದಯವು ಕುಂದುವ ಹಾಗೆಯೂ ಅವರ ಎಲ್ಲಾ ಬಾಗಿಲುಗಳಲ್ಲಿ ಬೀಳೋಣವು ಹೆಚ್ಚಾಗುವ ಹಾಗೆಯೂ ಕತ್ತಿಯ ಮೊನೆಯನ್ನಿಟ್ಟಿದ್ದೇನೆ; ಹಾ, ಅದು ಥಳಥಳಿಸುತ್ತಿದೆ, ಕೊಲೆ ಮಾಡುವದಕ್ಕೆ ಮಸಿಯಲ್ಪಟ್ಟಿದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರ ಹೃದಯವು ನೀರಾಗಿ ಬಹುಜನ ಎಡವಿಬೀಳುವಂತೆ ಸಂಹರಿಸುವ ಖಡ್ಗವನ್ನು ಅವರ ಪುರದ್ವಾರಗಳಿಗೆಲ್ಲಾ ತಂದಿದ್ದೇನೆ. ಆಹಾ, ವಿುಂಚಿನಂತೆ ವಿುಂಚುತ್ತದೆ, ವಧೆಗಾಗಿ ಉಜ್ಜಿದೆ!
Kannada Bible (KNCL) BSI 2016
ನೀರಾಗುವುದು ಜನರ ಹೃದಯ, ಎಡವಿ ಬೀಳುವರು ಬಹುಜನ. ಪುರದ್ವಾರಗಳಿಗೇ ತಂದಿರುವೆನು ಹತಿಸುವಾ ಖಡ್ಗವ. ಮಿನುಗುತಿಹುದದು ಮಿಂಚಿನಂತೆ ಹರಿತವಿದೆ ವಧೆಗಾಗುವ ಕತ್ತಿಯಂತೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರ ಹೃದಯವು ಕರಗುವ ಹಾಗೆಯೂ, ಅವರ ಎಲ್ಲಾ ಬಾಗಿಲುಗಳಲ್ಲಿ ಪತನವು ಹೆಚ್ಚಾಗುವ ಹಾಗೆಯೂ ಖಡ್ಗದ ಮೊನೆ ಇಟ್ಟಿದ್ದೇನೆ. ಆಹಾ, ಮಿಂಚಿನಂತೆ ಹೊಡೆಯಲು ಈ ಬಲೆ ಹೆಣೆಯಲಾಗಿದೆ ಅದನ್ನು ಕೊಲೆಮಾಡುವುದಕ್ಕೆ ಮಸೆಯಲಾಗಿದೆ.