Ezekiel 21:24 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನೀನು ಅನೇಕ ದುಷ್ಕೃತ್ಯಗಳನ್ನು ಮಾಡಿರುವೆ. ನಿನ್ನ ಪಾಪಗಳು ಘಹಳ ಸ್ಪಷ್ಟವಾಗಿವೆ. ನೀನು ದೋಷಿ ಎಂಬುದನ್ನು ನಾನು ನೆನಪುಮಾಡಿಕೊಳ್ಳುವಂತೆ ಮಾಡುವೆ. ವೈರಿಯು ನಿನ್ನನ್ನು ಹಿಡಿಯುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಿಮ್ಮ ಅಪರಾಧಗಳು ಬಯಲಿಗೆ ಬಂದು, ನಿಮ್ಮ ಪಾಪಗಳು ನಿಮ್ಮ ಕಾರ್ಯಗಳಲ್ಲೆಲ್ಲಾ ತಲೆದೋರಿ, ನೀವು ನಿಮ್ಮ ಅಧರ್ಮವನ್ನು ನನ್ನ ಜ್ಞಾಪಕಕ್ಕೆ ತಂದು, ಪಾಪಿಗಳಾಗಿ ನನ್ನ ನೆನಪಿಗೆ ತಂದಿರುವಿರಿ. ಆದುದರಿಂದ ಶತ್ರುವಿನ ಕೈಗೆ ಸಿಕ್ಕಿ ಬೀಳುವಿರಿ.
Kannada BSI Bible 2016
ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮ ದ್ರೋಹಗಳು ಪ್ರಕಟವಾಗಿ ನಿಮ್ಮ ಕೆಲಸಗಳಲ್ಲೆಲ್ಲಾ ನಿಮ್ಮ ಪಾಪಗಳು ಕಾಣುವ ಹಾಗೆ ನೀವು ನಿಮ್ಮ ಅಕ್ರಮಗಳನ್ನು ಜ್ಞಾಪಕಕ್ಕೆ ತಂದದ್ದರಿಂದ ನೀವು ಕೈಯಲ್ಲಿ ಹಿಡಿಯಲ್ಪಡುವಿರಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನಿಮ್ಮ ಅಪರಾಧಗಳು ಬೈಲಿಗೆ ಬಂದು ನಿಮ್ಮ ಪಾಪಗಳು ನಿಮ್ಮ ಕಾರ್ಯಗಳಲ್ಲೆಲ್ಲಾ ತಲೆದೋರಿ ನೀವು ನಿಮ್ಮ ಅಧರ್ಮವನ್ನು ನನ್ನ ಜ್ಞಾಪಕಕ್ಕೆ ತಂದು [ಪಾಪಿಗಳಾಗಿ] ನನ್ನ ನೆನಪಿಗೆ ಬಂದಿರಾದ ಕಾರಣ ಶತ್ರುವಿನ ಕೈಗೆ ಸಿಕ್ಕಿಬೀಳುವಿರಿ.
Kannada Bible (KNCL) BSI 2016
ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ನಿಮ್ಮ ಅಪರಾಧಗಳು ಬೆಳಕಿಗೆ ಬಂದು, ನಿಮ್ಮ ಪಾಪಗಳು ನಿಮ್ಮ ಕಾರ್ಯಗಳಲ್ಲೆಲ್ಲಾ ಪ್ರತ್ಯಕ್ಷವಾಗಿ, ನೀವು ನಿಮ್ಮ ಅಧರ್ಮವನ್ನು ನನ್ನ ನೆನಪಿಗೆ ತಂದಿರುವಿರಿ; ಆದಕಾರಣ ಶತ್ರುವಿನ ಕೈಗೆ ಸಿಕ್ಕಿಬೀಳುವಿರಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನಿಮ್ಮ ದ್ರೋಹಗಳು ಪ್ರಕಟವಾಗಿ, ನಿಮ್ಮ ಕೆಲಸಗಳಲ್ಲೆಲ್ಲಾ ನಿಮ್ಮ ಪಾಪಗಳು ಕಾಣುವ ಹಾಗೆ, ನೀವು ನಿಮ್ಮ ಅಕ್ರಮಗಳನ್ನು ಜ್ಞಾಪಕಕ್ಕೆ ತಂದದ್ದರಿಂದ ನೀವು ಕೈಗೆ ಸಿಕ್ಕಿ ಬೀಳುವಿರಿ.