Ezekiel 22:3 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನೀನು ಹೀಗೆ ಹೇಳಙೇಕು: ‘ನನ್ನ ಒಡೆಯನಾದ ಯೆಹೋವನ ಮಾತುಗಳಿವು. ಈ ನಗರವು ಕೊಲೆಗಾರರಿಂದ ತುಂಬಿದೆ. ಆದ್ದರಿಂದ ಆಕೆಯ ಶಿಕ್ಷೆಯ ದಿನವು ಘಂದಿದೆ. ಆಕೆ ತನಗೋಸ್ಕರ ಹೊಲಸು ವಿಗ್ರಹಗಳನ್ನು ಮಾಡಿ ತನ್ನನ್ನು ಹೊಲಸು ಮಾಡಿಕೊಂಡಿದ್ದಾಳೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನಿನ್ನ ಮಧ್ಯದಲ್ಲಿ ರಕ್ತವನ್ನು ಸುರಿಸಿ, ದಂಡನೆಯ ಕಾಲವನ್ನು ಹತ್ತಿರಕ್ಕೆ ತಂದುಕೊಂಡ ನಗರಿಯೇ! ನಿನ್ನ ಕೇಡಿಗಾಗಿ ವಿಗ್ರಹಗಳನ್ನು ಮಾಡಿಕೊಂಡು ನಿನ್ನನ್ನು ಹೊಲೆಗೆಡಿಸಿಕೊಂಡ ನಗರಿಯೇ!
Kannada BSI Bible 2016
ನೀನು ಹೇಳಬೇಕಾದದ್ದೇನಂದರೆ, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಪಟ್ಟಣವು ಅದರ ಮಧ್ಯದಲ್ಲಿ ಅದರ ಕಾಲ ಬರುವ ಹಾಗೆ ರಕ್ತವನ್ನು ಚೆಲ್ಲುತ್ತದೆ. ತನ್ನನ್ನು ಅಶುದ್ಧ ಮಾಡುವ ಹಾಗೆ ತನ್ನಲ್ಲಿ ವಿಗ್ರಹಗಳನ್ನು ಮಾಡಿಕೊಂಡಿದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನಿನ್ನ ಮಧ್ಯದಲ್ಲಿ ರಕ್ತವನ್ನು ಸುರಿಸಿ ದಂಡನೆಯ ಕಾಲವನ್ನು ಹತ್ತಿರಕ್ಕೆ ತಂದುಕೊಂಡ ಪುರಿಯೇ! ನಿನ್ನ ಕೇಡಿಗಾಗಿ ಬೊಂಬೆಗಳನ್ನು ಮಾಡಿಕೊಂಡು ನಿನ್ನನ್ನು ಹೊಲೆಗೆಡಿಸಿಕೊಂಡ ನಗರಿಯೇ!
Kannada Bible (KNCL) BSI 2016
ಸರ್ವೇಶ್ವರ ದೇವರು ಇಂತೆನ್ನುತ್ತಾರೆ - ನಿನ್ನ ಮಧ್ಯೆ ರಕ್ತ ಸುರಿಸಿ, ದಂಡನೆಯ ಕಾಲವನ್ನು ಹತ್ತಿರಕ್ಕೆ ತಂದುಕೊಂಡ ನಗರಿಯೇ, ನಿನ್ನ ಕೇಡಿಗಾಗಿಯೇ ವಿಗ್ರಹಗಳನ್ನು ಮಾಡಿಕೊಂಡು ನಿನ್ನನ್ನೆ ಹೊಲೆಗೆಡಿಸಿಕೊಂಡ ನಗರಿಯೇ,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಮೇಲೆ ನೀನು ಹೇಳಬೇಕಾದದ್ದೇನೆಂದರೆ, ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ಪಟ್ಟಣವು ಅದರ ಮಧ್ಯದಲ್ಲಿ ಅದರ ದಂಡನೆಯ ಕಾಲ ಬರುವಂತೆ ರಕ್ತವನ್ನು ಚೆಲ್ಲುತ್ತದೆ. ತನ್ನನ್ನು ಅಶುದ್ಧಮಾಡುವಂತೆ ತನ್ನಲ್ಲಿ ವಿಗ್ರಹ ಮಾಡಿಕೊಂಡಿದೆ.