Ezekiel 23:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಕೆಗೆ ಅಶ್ಶೂರದ ಅಧಿಕಾರಿಗಳೂ ನಾಯಕರುಗಳೂ ಬೇಕಾಗಿದ್ದರು. ಆಕೆಗೆ ನೀಲ ಸಮವಸ್ತ್ರ ಧರಿಸಿ ಕುದುರೆಸವಾರಿ ಮಾಡುವ ಸೈನಿಕರು ಬೇಕಾಗಿದ್ದರು. ಅವರೆಲ್ಲಾ ಮನೋಹರವಾದ ಯುವಕರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇವಳು ತನ್ನ ನೆರೆಯವರಾದ ಅಶ್ಶೂರ್ಯರನ್ನೂ, ನಾಯಕರನ್ನೂ, ಅಧಿಕಾರಿಗಳನ್ನು ವಿಚಿತ್ರವಾಗಿ ಉಡುಪು ಧರಿಸಿ ಕುದರೆಗಳ ಮೇಲೆ ಸವಾರಿಮಾಡುವ ರಾಹುತರನ್ನು, ಸುಂದರವಾದ ಯುವಕರನ್ನು ಮೋಹಿಸಿದಳು.
Kannada BSI Bible 2016
ಅವಳು ತನ್ನ ನೆರೆಯವರಾದ ಅಶ್ಶೂರ್ಯ ರನ್ನೂ ನಾಯಕರು ಮತ್ತು ಅಧಿಕಾರಸ್ಥರು ಗಂಭೀರವಾಗಿ ಧರಿಸಲ್ಪಟ್ಟು ಕುದುರೆಗಳ ಮೇಲೆ ಸವಾರಿಮಾಡುವ ರಾಹುತರಾಗಿಯೂ ಅಪೇಕ್ಷಿಸತಕ್ಕ ಯೌವನಸ್ಥರಾ ಗಿಯೂ ಇರುವಂಥ ಅವರನ್ನು ಮೋಹಿಸಿದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವಳು ನಾಯಕೋಪನಾಯಕರೂ ಯೋಧರೂ ವಿಚಿತ್ರಾಂಬರರೂ ಅಶ್ವಾರೂಢರೂ ಯಾರೂ ತಪ್ಪದೆ ಮನೋಹರ ಯುವಕರೂ ಆದ ಅಶ್ಶೂರ್ಯರನ್ನು ಮೋಹಿಸಿದಳು.
Kannada Bible (KNCL) BSI 2016
ಇವಳು ನಾಯಕ-ಉಪನಾಯಕರೂ ಯೋಧರೂ ವಿಚಿತ್ರ ವಸ್ತ್ರಧಾರಿಗಳೂ ಅಶ್ವಾರೂಢರೂ ಎಲ್ಲ ಮನೋಹರ ಯುವಕರೂ ಆದ ಅಸ್ಸೀರಿಯರನ್ನು ಮೋಹಿಸಿದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವಳು ಯೋಧರಾದ ಅಸ್ಸೀರಿಯರನ್ನೂ, ನಾಯಕರು ಮತ್ತು ಅಧಿಕಾರಸ್ಥರು ಗಂಭೀರವಾಗಿ ಉಡುಪು ಧರಿಸಿ ಕುದುರೆಗಳ ಮೇಲೆ ಸವಾರಿ ಮಾಡುವ ರಾಹುತರಾಗಿಯೂ, ಅಪೇಕ್ಷಿಸತಕ್ಕ ಯೌವನಸ್ಥರಾಗಿಯೂ ಇರುವಂಥವರನ್ನು ಮೋಹಿಸಿದಳು.