Ezekiel 23:17 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ಆ ಬಾಬಿಲೋನಿನವರು ಬಂದು ಆಕೆಯ ರತಿಮಂಚವನೆಐರೀ ಆಕೆಯನ್ನು ಸಂಗಮಿಸಿದರು. ಆಕೆಯನ್ನು ಚೆನ್ನಾಗಿ ಅನುಭೋಗಿಸಿ ಮಲಿನವನ್ನಾಗಿ ಮಾಡಿದರು. ಆದ್ದರಿಂದ ಆಕೆಗೆ ಅವರು ಅಸಹ್ಯವೆನಿಸಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಬಾಬೆಲಿನವರು ಇವಳ ಪ್ರೀತಿಯ ಮಂಚವನ್ನೇರಿ ತಮ್ಮ ವ್ಯಭಿಚಾರಿಕೆಯಿಂದ ಇವಳನ್ನು ಕೆಡಿಸಿದರು; ಇವಳು ಅವರಿಂದ ಅಪವಿತ್ರವಾಗಲು, ಅವಳಿಗೆ ಈ ಬಗ್ಗೆ ಜಿಗುಪ್ಸೆಯಾಯಿತು.
Kannada BSI Bible 2016
ಬಾಬೆಲಿನವರು ಅವಳ, ಪ್ರೀತಿಯ ಹಾಸಿ ಗೆಯ ಮೇಲೆ ಬಂದು ಅವಳನ್ನು ವ್ಯಭಿಚಾರದಿಂದ ಅಪವಿತ್ರಪಡಿಸಿದರು; ಅವಳು ಅವರಿಂದ ಹಾಳಾದ ಮೇಲೆ ತನ್ನ ಮನಸ್ಸನ್ನು ಅವರ ಕಡೆಯಿಂದ ಅಗಲಿಸಿ ಕೊಂಡಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಬಾಬೆಲಿನವರು ಇವಳ ರತಿಮಂಚವನ್ನೇರಿ ತಮ್ಮ ಸೂಳೆಗಾರಿಕೆಯಿಂದ ಇವಳನ್ನು ಕೆಡಿಸಿದರು; ಇವಳು ಅವರಿಂದ ಹೊಲಸಾಗಲು ಇವಳ ಆಶೆಯು ಅವರಿಂದ ತೊಲಗಿತು.
Kannada Bible (KNCL) BSI 2016
ಆ ಬಾಬಿಲೋನಿನವರು ಇವಳ ರತಿಮಂಚವನ್ನೇರಿ ತಮ್ಮ ಕಾಮತೃಷೆಯಿಂದ ಇವಳನ್ನು ಕೆಡಿಸಿದರು; ಇವಳು ಅವರಿಂದ ಎಷ್ಟು ಅಶುದ್ಧಳಾದಳೆಂದರೆ ಇವಳಿಗೇ ಅವರ ಬಗ್ಗೆ ಜಿಗುಪ್ಸೆ ಹುಟ್ಟಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಬಾಬಿಲೋನಿನವರು ಅವರ ಪ್ರೀತಿಯ ಹಾಸಿಗೆಯ ಮೇಲೆ ಬಂದು ಆಕೆಯನ್ನು ವ್ಯಭಿಚಾರದಿಂದ ಅಪವಿತ್ರಪಡಿಸಿದರು. ಅವಳು ಅವರಿಂದ ಅಪವಿತ್ರಳಾದ ಮೇಲೆ ಅವರ ಬಗ್ಗೆ ಇವಳಿಗೇ ಜಿಗುಪ್ಸೆ ಹುಟ್ಟಿತು.