Ezekiel 23:18 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ತಾನು ಅಪನಂಬಿಗಸ್ತಳೆಂದು ಎಲ್ಲರೂ ತನ್ನನ್ನು ಗುರುತಿಸುವಂತೆ ಒಹೊಲೀಘಳು ಮಾಡಿದಳು. ಆಕೆಯು ತನ್ನ ನಗಐ ಶರೀರವನ್ನು ತೋರಿಸಿದಳು. ಆದ್ದರಿಂದ ಅವಳ ಅಕ್ಕ ನನಗೆ ಹೇಗೆ ಅಸಹ್ಯವಾದಳೋ ಅದೇ ರೀತಿ ಈಕೆಯೂ ನನಗೆ ಅಸಹ್ಯವಾದಳು. ನನಗೆ ಆಕೆಯ ಅಕ್ಕನ ಮೇಲಿದ್ದ ಅನುರಾಗ ಹೇಗೆ ತೊಲಗಿಹೋಯಿತೋ ಹಾಗೆಯೇ ಈಕೆಯ ಮೇಲಿನ ಅನುರಾಗವೂ ತೊಲಗಿಹೋಯಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೀಗೆ ಇವಳು ವ್ಯಭಿಚಾರವನ್ನು ಮಾಡಿ, ತನ್ನ ಬೆತ್ತಲೆತನವನ್ನು ಬಯಲುಪಡಿಸಿಕೊಂಡಾಗ, ತನ್ನ ಪ್ರೀತಿಯು ಮೊದಲು ಇವಳ ಅಕ್ಕನಿಂದ ಅಗಲಿದ ಹಾಗೆ ಇವಳಿಂದಲೂ ಅಗಲಿತು.
Kannada BSI Bible 2016
ಹೀಗೆ ಅವಳು ವ್ಯಭಿಚಾರವನ್ನು ಕಂಡುಹಿಡಿದು ತನ್ನ ಬೆತ್ತಲೆತನವನು ಬಯಲುಪಡಿಸಿ ಕೊಂಡಾಗ, ತನ್ನ ಅನುರಾಗವು ಮೊದಲು ಇವಳ ಸಹೋದರಿಯಿಂದ ಅಗಲಿದ ಹಾಗೆ ಇವಳಿಂದಲೂ ಅಗಲಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವಳು ಮುಚ್ಚುಮರೆಯಿಲ್ಲದೆ ಸೂಳೆತನಮಾಡಿ ತನ್ನ ಮಾನವನ್ನು ಕೆಡಿಸಿಕೊಂಡಾಗ ನನ್ನ ಅನುರಾಗವು ಮೊದಲು ಇವಳ ಅಕ್ಕನಿಂದ ಅಗಲಿದ ಹಾಗೆ ಇವಳಿಂದಲೂ ಅಗಲಿತು.
Kannada Bible (KNCL) BSI 2016
ಇವಳು ಮುಚ್ಚುಮರೆಯಿಲ್ಲದೆ ಹಾದರಮಾಡಿ ತನ್ನ ಮಾನವನ್ನೇ ಕೆಡಿಸಿಕೊಂಡಾಗ ನನ್ನ ಅನುರಾಗ, ಮೊದಲು ಇವಳ ಅಕ್ಕನಿಂದ ದೂರವಾದ ಹಾಗೆ, ಇವಳಿಂದಲೂ ದೂರವಾಯಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೀಗೆ ಅವಳು ವ್ಯಭಿಚಾರವನ್ನು ಕಂಡುಹಿಡಿದು ತನ್ನ ಬೆತ್ತಲೆತನವನ್ನು ಬಯಲು ಪಡಿಸಿಕೊಂಡಾಗ, ತನ್ನ ಜಿಗುಪ್ಸೆ ಮೊದಲು ಇವಳ ಸಹೋದರಿಯಿಂದ ಅಗಲಿದ ಹಾಗೆ ಇವಳಿಂದಲೂ ಅಗಲಿತು.