Ezekiel 23:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮತ್ತೆಮತ್ತೆ ಒಹೊಲೀಘಳು ನನಗೆ ಅಪನಂಬಿಗಸ್ತಳಾದಳು. ಆಕೆಯು ಯುವತಿಯಾಗಿದ್ದಾಗ ಈಜಿಪ್ಟಿನಲ್ಲಿ ತಾನು ಮಾಡಿಕೊಂಡಿದ್ದ ಅನೈತಿಕ ಸಂಬಂಧಗಳನ್ನು ನೆನಪುಮಾಡಿಕೊಂಡಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೂ ಇವಳು ತಾನು ಐಗುಪ್ತ ದೇಶದಲ್ಲಿ ವ್ಯಭಿಚಾರಿಯಾಗಿದ್ದ ತನ್ನ ಎಳೆಯ ಪ್ರಾಯವನ್ನು ಜ್ಞಾಪಕಮಾಡಿಕೊಂಡು, ತನ್ನ ವ್ಯಭಿಚಾರವನ್ನು ಇನ್ನೂ ಹೆಚ್ಚಿಸಿದಳು.
Kannada BSI Bible 2016
ಆದರೂ ಅವಳು ಐಗುಪ್ತದೇಶದಲ್ಲಿ ವ್ಯಭಿಚಾರ ಮಾಡಿದಾಗ ತನ್ನ ಯೌವನದ ದಿನಗಳನ್ನು ಜ್ಞಾಪಕಮಾಡಿಕೊಂಡು ತನ್ನ ವ್ಯಭಿಚಾರವನ್ನು ಹೆಚ್ಚಿಸಿ ದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೂ ಇವಳು ತಾನು ಐಗುಪ್ತದೇಶದಲ್ಲಿ ಸೂಳೆಯಾಗಿದ್ದ ತನ್ನ ಎಳೆಪ್ರಾಯವನ್ನು ಜ್ಞಾಪಕಮಾಡಿಕೊಂಡು ತನ್ನ ಸೂಳೆತನವನ್ನು ಇನ್ನೂ ಹೆಚ್ಚಿಸಿ
Kannada Bible (KNCL) BSI 2016
ಆದರೂ ಇವಳು ತಾನು ಈಜಿಪ್ಟ್ ದೇಶದಲ್ಲಿ ಸೂಳೆಯಾಗಿದ್ದ ತನ್ನ ತಾರುಣ್ಯವನ್ನು ನೆನಪುಮಾಡಿಕೊಂಡು ತನ್ನ ಸೂಳೆತನವನ್ನು ಇನ್ನೂ ಹೆಚ್ಚಿಸಿದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೂ ಅವಳು ಈಜಿಪ್ಟ್ ದೇಶದಲ್ಲಿ ವ್ಯಭಿಚಾರ ಮಾಡಿದಾಗ ತನ್ನ ಯೌವನದ ದಿನಗಳನ್ನು ಜ್ಞಾಪಕಮಾಡಿಕೊಂಡು ತನ್ನ ವ್ಯಭಿಚಾರವನ್ನು ಹೆಚ್ಚಿಸಿದಳು.