Ezekiel 23:39 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವರ ವಿಗ್ರಹಗಳಿಗೋಸ್ಕರ ತಮ್ಮ ಮಕ್ಕಳನ್ನು ಕೊಂದರು. ಅನಂತರ ಅದೇ ದಿನದಲ್ಲೇ ನನ್ನ ಪವಿತ್ರ ಆಲಯದೊಳಕ್ಕೆ ಹೋಗಿ ಅದನ್ನು ಹೊಲೆ ಮಾಡಿದರು. ನನ್ನ ಆಲಯದೊಳಗೆ ಅವರು ಹಾಗೆ ಮಾಡಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತಮ್ಮ ಮಕ್ಕಳನ್ನು ಕೊಂದು, ತಮ್ಮ ವಿಗ್ರಹಗಳಿಗೆ ಅರ್ಪಿಸಿದ ದಿನದಲ್ಲೇ ನನ್ನ ಪವಿತ್ರಾಲಯವನ್ನು ಸೇರಿ ಅಪವಿತ್ರ ಮಾಡಿದರು; ಇಗೋ, ನನ್ನ ಮಂದಿರದ ಒಳಗೆ ಇದನ್ನು ನಡೆಸಿದ್ದಾರೆ.
Kannada BSI Bible 2016
ತಮ್ಮ ಮಕ್ಕಳನ್ನು ವಿಗ್ರಹಗಳಿಗೋಸ್ಕರ ಕೊಂದು ಹಾಕಿದ ಮೇಲೆ ಅದೇ ದಿನದಲ್ಲಿ ನನ್ನ ಪರಿಶುದ್ಧ ಸ್ಥಳವನ್ನು ಕೆಡಿಸುವದಕ್ಕೆ ಬಂದರು. ಇಗೋ, ಅವರು ನನ್ನ ಆಲಯದ ಮಧ್ಯದಲ್ಲಿಯೇ ಹೀಗೆ ಮಾಡಿದ್ದಾರೆ;
Kannada BSI JV (ಕನ್ನಡ ಸತ್ಯವೇದವು J.V. (BSI))
ತಮ್ಮ ಮಕ್ಕಳನ್ನು ಕೊಂದು ತಮ್ಮ ಬೊಂಬೆಗಳಿಗೆ ಅರ್ಪಿಸಿದ ದಿನದಲ್ಲೇ ನನ್ನ ಪವಿತ್ರಾಲಯವನ್ನು ಸೇರಿ ಹೊಲೆಗೈದರು; ಇಗೋ, ನನ್ನ ಮಂದಿರದ ನಟ್ಟನಡುವೆ ಇದನ್ನು ನಡಿಸಿದರು.
Kannada Bible (KNCL) BSI 2016
ತಮ್ಮ ಮಕ್ಕಳನ್ನು ಕೊಂದು, ತಮ್ಮ ವಿಗ್ರಹಗಳಿಗೆ ಅರ್ಪಿಸಿದ ದಿನದಲ್ಲೇ ನನ್ನ ಪವಿತ್ರಾಲಯವನ್ನು ಸೇರಿ ಅಪವಿತ್ರಮಾಡಿದರು; ಹೌದು, ನನ್ನ ಮಂದಿರದ ನಟ್ಟನಡುವೆ ಇದನ್ನು ನಡೆಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತಮ್ಮ ಮಕ್ಕಳನ್ನು ವಿಗ್ರಹಗಳಿಗೋಸ್ಕರ ಕೊಂದುಹಾಕಿದ ಮೇಲೆ ಅದೇ ದಿನದಲ್ಲಿ ನನ್ನ ಪರಿಶುದ್ಧ ಸ್ಥಳವನ್ನು ಕೆಡಿಸುವುದಕ್ಕೆ ಬಂದರು. ಅವರು ನನ್ನ ಆಲಯದ ಒಳಗೆ ಹೀಗೆ ಮಾಡಿದ್ದಾರೆ.