Ezekiel 23:48 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಈ ರೀತಿ, ನಾನು ಅವರ ಅವಮಾನಕರವಾದ ನಡತೆಯನ್ನು ದೇಶದಿಂದ ತೆಗೆದುಹಾಕುವೆನು. ಬೇರೆ ಸ್ತ್ರೀಯರು ಇಂಥಾ ನಾಚಿಕೆಗೆಟ್ಟ ಕೆಲಸ ಮಾಡಬಾರದೆಂದು ಎಚ್ಚರಿಸುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಹೀಗೆ ನಾನು ದೇಶದೊಳಗಿಂದ ದುಷ್ಕರ್ಮವನ್ನು ತೊಲಗಿಸುವೆನು; ಇದರಿಂದ ಸಮಸ್ತ ಸ್ತ್ರೀಯರಿಗೂ ನಿಮ್ಮ ದುಷ್ಕರ್ಮವನ್ನು ಅನುಸರಿಸಬಾರದೆಂದು ಬುದ್ಧಿ ಬರುವುದು.
Kannada BSI Bible 2016
ಹೀಗೆ ಸ್ತ್ರೀಯರೆಲ್ಲರೂ ನಿಮ್ಮ ದುಷ್ಕ ರ್ಮದ ಪ್ರಕಾರ ಮಾಡದಿರಲೆಂದು ಬೋಧಿಸಿ ದೇಶ ದೊಳಗಿಂದ ದುಷ್ಕರ್ಮವನ್ನು ತೆಗೆದುಹಾಕುವೆನು.ನಿಮ್ಮ ದುಷ್ಕರ್ಮದ ಫಲವನ್ನು ನಿಮ್ಮ ಮೇಲೆಯೇ ಮುಯ್ಯಿ ತೀರಿಸುವೆನು. ನೀವು ನಿಮ್ಮ ವಿಗ್ರಹಗಳ ಪಾಪಗಳನ್ನು ಹೊರುವಿರಿ; ಆಗ ದೇವರಾದ ಕರ್ತನು ನಾನೇ ಎಂದು ತಿಳಿದುಕೊಳ್ಳುವಿರಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೀಗೆ ನಾನು ದೇಶದೊಳಗಿಂದ ಪುಂಡಾಟವನ್ನು ತೊಲಗಿಸುವೆನು; ಇದರಿಂದ ಸಮಸ್ತ ಸ್ತ್ರೀಯರಿಗೂ ನಿಮ್ಮ ಪುಂಡಾಟವನ್ನು ಅನುಸರಿಸಬಾರದೆಂದು ಬುದ್ಧಿಬರುವದು. ನಿಮ್ಮ ಪುಂಡಾಟದ ಫಲವನ್ನು ನಿಮಗೆ ತಿನ್ನಿಸುವರು;
Kannada Bible (KNCL) BSI 2016
ಹೀಗೆ ನಾನು ನಾಡಿನೊಳಗಿಂದ ಲಂಪಟತನವನ್ನು ತೊಲಗಿಸುವೆನು; ಇದರಿಂದ ಸಮಸ್ತ ಮಹಿಳೆಯರಿಗೂ ನಿಮ್ಮ ಲಂಪಟತನವನ್ನೂ ಅನುಸರಿಸಬಾರದೆಂಬ ಬುದ್ಧಿ ಬರುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಹೀಗೆ ಸ್ತ್ರೀಯರೆಲ್ಲರೂ ನಿಮ್ಮ ದುಷ್ಕರ್ಮದ ಪ್ರಕಾರ ಮಾಡದಿರಲೆಂದು ಅವರಿಗೆ ಬೋಧಿಸಿ ದೇಶದೊಳಗಿಂದ ದುಷ್ಕರ್ಮವನ್ನು ತೆಗೆದುಹಾಕುವೆನು.