Ezekiel 24:25 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆತನು ಹೇಳಿದ್ದೇನೆಂದರೆ: “ನರಪುತ್ರನೇ, ನಾನು ಘಲಿಷ್ಠವಾದ ಆಲಯವನ್ನು ಜನರಿಂದ ತೆಗೆದುಬಿಡುವೆನು. ಆ ಸುಂದರ ಸ್ಥಳವು ಅವರಿಗೆ ಆನಂದವನ್ನು ಕೊಡುತ್ತಿದೆ. ಆ ಸ್ಥಳವನ್ನು ನೋಡಲು ಅವರು ಆತುರಪಡುವರು. ಆದರೆ ನಾನು ಆಲಯವನ್ನೂ ಮತ್ತು ಅವರ ಮಕ್ಕಳನ್ನೂ ಆ ಜನರಿಂದ ತೆಗೆದುಬಿಡುವೆನು. ಆ ದಿನದಂದು, ಪಾರಾದವನು ನಿನ್ನ ಬಳಿಗೆ ಬಂದು ನಾಶನದ ಕುರಿತಾದ ಕೆಟ್ಟ ಸುದ್ದಿಯನ್ನು ನಿನಗೆ ತಿಳಿಸುವನು. (Verses 25-26)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ನರಪುತ್ರನೇ, ಅವರ ಬಲಾಧಾರವೂ, ಅವರ ನೇತ್ರಾನಂದಕರವಾದ ಆಲಯವನ್ನು, ಅವರು ಆಶಿಸುವುದನ್ನೂ, ಅವರ ಗಂಡು ಮತ್ತು ಹೆಣ್ಣು ಮಕ್ಕಳನ್ನೂ ಅವರ ಬಲದಿಂದ ತೆಗೆದು ಹಾಕುವ ದಿನದಲ್ಲಿ,
Kannada BSI Bible 2016
ಇದಲ್ಲದೆ ಮನುಷ್ಯಪುತ್ರನೇ, ಅವರ ಮಹತ್ತಾದ ಸಂತೋಷವನ್ನೂ ನೇತ್ರಾನಂದಕರವಾದದ್ದನ್ನೂ ಅವರು ಆಶಿಸುವದನ್ನೂ ಕುಮಾರ ಕುಮಾರ್ತೆಯರನ್ನೂ ಅವರ ಬಲದಿಂದ ನಾನು ತೆಗೆದುಹಾಕುವ
Kannada BSI JV (ಕನ್ನಡ ಸತ್ಯವೇದವು J.V. (BSI))
ನರಪುತ್ರನೇ, ಅವರಿಗೆ ಬಲಾಧಾರವೂ ನೇತ್ರಾನಂದವೂ ಆದ ಅವರ ಇಷ್ಟಸುಂದರಾಲಯವನ್ನೂ ಹೃದಯೋಲ್ಲಾಸವಾದ ಅವರ ಗಂಡುಹೆಣ್ಣುಮಕ್ಕಳನ್ನೂ
Kannada Bible (KNCL) BSI 2016
“ನರಪುತ್ರನೇ, ಅವರಿಗೆ ಬಲಾಧಾರವೂ ನೇತ್ರಾನಂದವೂ ಆದ ಅವರ ಇಷ್ಟು ಸುಂದರ ಆಲಯವನ್ನೂ ಹೃದಯೋಲ್ಲಾಸವಾದ ಅವನ ಗಂಡು ಹೆಣ್ಣುಮಕ್ಕಳನ್ನೂ ನಾನು ನಿರ್ಮೂಲಮಾಡುವ ದಿನದಲ್ಲಿ
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಮನುಷ್ಯಪುತ್ರನೇ, ಅವರ ಮಹತ್ತರ ಸಂತೋಷವನ್ನೂ ಅವರ ನೇತ್ರಾನಂದಕರವಾದದ್ದನ್ನೂ ಅವರು ಆಶಿಸುವುದನ್ನೂ ಅವರ ಪುತ್ರಪುತ್ರಿಯರನ್ನೂ ಅವರ ಬಲದಿಂದ ನಾನು ತೆಗೆದುಹಾಕುವ ದಿನದಲ್ಲಿ,