Ezekiel 26:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬಾಬಿಲೋನಿನ ರಾಜನು ಕುದುರೆಯ ಮೇಲೆ ಕುಳಿತುಕೊಂಡು ನಿನ್ನ ನಗರದೊಳಗೆ ಪ್ರವೇಶಮಾಡುವನು. ನಿನ್ನ ರಸ್ತೆಗಳ ಮೇಲೆ ಅವನ ಕುದುರೆಯ ಗೊರಸು ಶಘ್ದವೇರಿಸುವದು. ನಿನ್ನನ್ನು ತನ್ನ ಖಡ್ಗದಿಂದ ಸಂಹರಿಸುವನು. ನಿನ್ನ ನಗರದಲ್ಲಿನ ಉನ್ನತಸ್ತಂಭಗಳು ಕೆಡವಲ್ಪಡುವವು,
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ತನ್ನ ಕುದುರೆಗಳ ಗೊರಸುಗಳಿಂದ ನಿನ್ನ ಬೀದಿಗಳನ್ನು ತುಳಿಸಿ, ಖಡ್ಗದಿಂದ ನಿನ್ನ ಜನರನ್ನು ಸಂಹರಿಸಿ, ನಿನ್ನ ಬಲವಾದ ಕಲ್ಲು ಕಂಬಗಳನ್ನು ಕೆಡವಿ ಹಾಕುವನು.
Kannada BSI Bible 2016
ಅವನು ತನ್ನ ಕುದುರೆಗಳ ಗೊರಸುಗಳಿಂದ ನಿನ್ನ ಬೀದಿಗಳನ್ನೆಲ್ಲಾ ತುಳಿಸುವನು; ಜನರನ್ನು ಕತ್ತಿಯಿಂದ ಕೊಲ್ಲುವನು; ಬಲವಾದ ಕೋಟೆಗಳು ನೆಲಕ್ಕೆ ಬೀಳುವವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ತನ್ನ ಕುದುರೆಗಳ ಗೊರಸುಗಳಿಂದ ನಿನ್ನ ಬೀದಿಗಳನ್ನು ತುಳಿಸಿ ಖಡ್ಗದಿಂದ ನಿನ್ನ ಜನರನ್ನು ಸಂಹರಿಸಿ ನಿನ್ನ ಬಲವಾದ ಕಲ್ಲುಕಂಬಗಳನ್ನು ಕೆಡವುವನು.
Kannada Bible (KNCL) BSI 2016
ಅವನು ತನ್ನ ಕುದುರೆಗಳ ಗೊರಸುಗಳಿಂದ ನಿನ್ನ ಬೀದಿಗಳನ್ನು ತುಳಿಸಿ, ಖಡ್ಗದಿಂದ ನಿನ್ನ ಜನರನ್ನು ಸಂಹರಿಸಿ, ನಿನ್ನ ಬಲವಾದ ಕಲ್ಲುಕಂಬಗಳನ್ನು ಕೆಡಹುವನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ತನ್ನ ಕುದುರೆಗಳ ಗೊರಸುಗಳಿಂದ ನಿನ್ನ ಬೀದಿಗಳನ್ನೆಲ್ಲಾ ತುಳಿಸುವನು; ನಿನ್ನ ಜನರನ್ನು ಖಡ್ಗದಿಂದ ಕೊಲ್ಲುವನು; ನಿನ್ನ ಬಲವಾದ ಕಂಬಗಳು ನೆಲಕ್ಕೆ ಬೀಳುವುವು.