Ezekiel 26:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಒಡೆಯನಾದ ಯೆಹೋವನು ತೂರಿಗೆ ಹೇಳುವುದೇನೆಂದರೆ, “ಭೂಮದ್ಯ ಸಮುದ್ರ ಕರಾವಳಿಯಲ್ಲಿರುವ ದೇಶದವರು ನೀನು ಕೆಳಗೆ ಬೀಳುವ ಶಘ್ದ ಕೇಳಿ ನಡುಗುವರು. ಅದು ನಿನ್ನ ಜನರು ಗಾಯಗೊಂಡು ಸಾಯುವಾಗ ಆಗುವದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕರ್ತನಾದ ಯೆಹೋವನು ತೂರಿಗೆ ಹೀಗೆ ಹೇಳುತ್ತಾನೆ, “ನಿನ್ನ ಪತನದ ಶಬ್ದಕ್ಕೂ, ಗಾಯಪಟ್ಟವರು ಕೂಗುವಾಗಲೂ, ನಿನ್ನ ಮಧ್ಯದಲ್ಲಿ ಕೊಲೆಯಾಗುವಾಗಲೂ ದ್ವೀಪಗಳು ಅದರುವುದಿಲ್ಲವೇ?
Kannada BSI Bible 2016
ದೇವರಾದ ಕರ್ತನು ತೂರಿಗೆ ಹೀಗೆ ಹೇಳು ತ್ತಾನೆ--ನಿಮ್ಮನ್ನು ಬೀಳುವಿಕೆಯ ಶಬ್ದದಿಂದಲೂ ಗಾಯ ಪಟ್ಟವರು ಕೂಗುವಾಗಲೂ ನಿನ್ನ ಮಧ್ಯದಲ್ಲಿ ಕೊಲೆ ಯಾಗುವಾಗಲೂ ದ್ವೀಪಗಳು ನಡುಗುವದಿಲ್ಲವೇ?
Kannada BSI JV (ಕನ್ನಡ ಸತ್ಯವೇದವು J.V. (BSI))
ಕರ್ತನಾದ ಯೆಹೋವನು ತೂರಿಗೆ ಹೀಗೆ ಹೇಳುತ್ತಾನೆ - ನಿನ್ನ ಮಧ್ಯದಲ್ಲಿ ಕೊಲೆಯುಂಟಾಗಿ ಗಾಯಪಟ್ಟವರು ನರಳುತ್ತಿರಲು ನೀನು ಧಡಮ್ಮನೆ ಬೀಳುವ ಶಬ್ದಕ್ಕೆ ದ್ವೀಪಗಳು ಅದರುವವಲ್ಲವೆ.
Kannada Bible (KNCL) BSI 2016
ಸರ್ವೇಶ್ವರನಾದ ದೇವರು ಟೈರ್ ನಗರಕ್ಕೆ ಹೀಗೆ ಹೇಳುತ್ತಾರೆ - “ನಿನ್ನ ಮಧ್ಯದಲ್ಲಿ ಕಗ್ಗೊಲೆಯುಂಟಾಗಿ, ಗಾಯಗೊಂಡವರು ನರಳುತ್ತಿರಲು, ನೀನು ಧಡಮ್ಮನೆ ಬೀಳುವ ಶಬ್ದಕ್ಕೆ ದ್ವೀಪಗಳು ಅದರುವವಲ್ಲವೆ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಸಾರ್ವಭೌಮ ಯೆಹೋವ ದೇವರು ಟೈರಿಗೆ ಹೀಗೆ ಹೇಳುತ್ತಾರೆ: ನಿನ್ನ ಪತನದ ಶಬ್ದಕ್ಕೂ, ಗಾಯಪಟ್ಟವರು ಕೂಗುವಾಗಲೂ, ನಿನ್ನ ಮಧ್ಯದಲ್ಲಿ ಕೊಲೆಯಾಗುವಾಗಲೂ ಸಮುದ್ರತೀರದ ಪ್ರದೇಶಗಳು ನಡುಗುವುದಿಲ್ಲವೇ?