Ezekiel 26:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇದು ನನ್ನ ಒಡೆಯನಾದ ಯೆಹೋವನ ನುಡಿ. “ತೂರ್, ನಾನು ನಿನ್ನನ್ನು ನಾಶಮಾಡುವೆನು. ಆಗ ನೀನು ಬರಿದಾದ ನಗರವಾಗಿರುವೆ. ಯಾರೂ ಅಲ್ಲಿ ವಾಸ ಮಾಡುವದಿಲ್ಲ. ನಿನ್ನ ಮೇಲೆ ಸಮುದ್ರವು ತುಂಬುವಂತೆ ಮಾಡುವೆನು. ಆ ಮಹಾಸಾಗರವು ನಿನ್ನನ್ನು ಮುಚ್ಚಿಬಿಡುವದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ನಿನ್ನನ್ನು ಹಾಳು ಊರನ್ನಾಗಿ ಮಾಡಿ, ನಿರ್ಜನ ಪಟ್ಟಣಗಳ ಗತಿಗೆ ತಂದು, ನೀನು ಜಲರಾಶಿಯಲ್ಲಿ ಮುಳುಗಿ ಹೋಗುವಂತೆ ನಿನ್ನ ಮೇಲೆ ಮಹಾಸಾಗರವನ್ನು ಬರಮಾಡುವೆನು.
Kannada BSI Bible 2016
ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ನಿನ್ನನ್ನು ನಿವಾಸಿಗಳಿಲ್ಲದ ಪಟ್ಟಣದ ಹಾಗೆ ಹಾಳಾದ ಪಟ್ಟಣವಾಗಿ ಮಾಡುವಾಗ ಹೆಚ್ಚು ನೀರು ಮುಚ್ಚುವ ಹಾಗೆ ಅಗಾಧವನ್ನು ನಿನ್ನ ಮೇಲೆ ಬರ ಮಾಡುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನಾನು ನಿನ್ನನ್ನು ಹಾಳೂರು ಮಾಡಿ ನಿರ್ಜನಪಟ್ಟಣಗಳ ಗತಿಗೆ ತಂದು ನೀನು ಜಲರಾಶಿಯಲ್ಲಿ ಮುಣುಗಿಹೋಗುವಂತೆ ನಿನ್ನ ಮೇಲೆ ಮಹಾಸಾಗರವನ್ನು ಉಕ್ಕಿಸುವಾಗ
Kannada Bible (KNCL) BSI 2016
ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: - “ನಾನು ನಿನ್ನನ್ನು ಹಾಳೂರು ಮಾಡಿ ನಿರ್ಜನ ಪಟ್ಟಣಗಳ ಗತಿಗೆ ತಂದು, ನೀನು ಜಲರಾಶಿಯಲ್ಲಿ ಮುಣುಗಿಹೋಗುವಂತೆ ನಿನ್ನ ಮೇಲೆ ಮಹಾಸಾಗರವನ್ನು ಉಕ್ಕಿಸುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ನಿನ್ನನ್ನು ನಿವಾಸಿಗಳಿಲ್ಲದ ಪಟ್ಟಣದ ಹಾಗೆ ಹಾಳಾದ ಪಟ್ಟಣವಾಗಿ ಮಾಡುವಾಗ ಹೆಚ್ಚು ನೀರು ಮುಚ್ಚುವ ಹಾಗೆ ಅಗಾಧ ಜಲರಾಶಿಯನ್ನು ನಿನ್ನ ಮೇಲೆ ಬರಮಾಡುವೆನು.