Ezekiel 26:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವನು ಮರದ ತೊಲೆಗಳನ್ನು ತಂದು ನಿನ್ನ ಗೋಡೆಗಳನ್ನು ಕೆಡವಿಬಿಡುವನು. ಗುದ್ದಲಿಗಳಿಂದ ನಿನ್ನ ಬುರುಜುಗಳನ್ನು ಕೆಡವಿಹಾಕುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಗುರಾಣಿ ಹಿಡಿದಿರುವವರನ್ನು ಕಳುಹಿಸಿ, ತನ್ನ ಯುದ್ಧ ಯಂತ್ರಗಳಿಂದ ನಿನ್ನ ಪೌಳಿಗೋಡೆಯನ್ನು ಹೊಡೆಯಿಸಿ, ತನ್ನ ಆಯುಧಗಳಿಂದ ನಿನ್ನ ಕೋಟೆ ಕೊತ್ತಲಗಳನ್ನು ಒಡೆದು ಬಿಡುವನು.
Kannada BSI Bible 2016
ತನ್ನ ಯುದ್ಧಯಂತ್ರಗಳನ್ನು ನಿನ್ನ ಗೋಡೆಗಳಿಗೆ ವಿರೋಧ ವಾಗಿ ತಾಕಿಸುವೆನು ನಿನ್ನ ಗೋಪುರಗಳನ್ನು ತನ್ನ ಕೊಡಲಿಗಳಿಂದ ಒಡೆದು ಬಿಡುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಗುರಾಣಿಯೆತ್ತಿರುವವರನ್ನು ಕಳುಹಿಸಿ ತನ್ನ ಭಿತ್ತಿಭೇದಕಯಂತ್ರಗಳಿಂದ ನಿನ್ನ ಪೌಳಿಗೋಡೆಯನ್ನು ಹೊಡೆಯಿಸಿ ತನ್ನ ಆಯುಧಗಳಿಂದ ನಿನ್ನ ಕೊತ್ತಲಗಳನ್ನು ಒಡೆದುಬಿಡುವನು.
Kannada Bible (KNCL) BSI 2016
ತನ್ನ ಭಿತ್ತಿಭೇದಕಯಂತ್ರಗಳಿಂದ ನಿನ್ನ ಪೌಳಿಗೋಡೆಯನ್ನು ಹೊಡೆಯಿಸಿ, ತನ್ನ ಆಯುಧಗಳಿಂದ ನಿನ್ನ ಕೊತ್ತಲಗಳನ್ನು ಒಡೆದುಬಿಡುವನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತನ್ನ ಯುದ್ಧ ಯಂತ್ರಗಳನ್ನು ನಿನ್ನ ಗೋಡೆಗಳಿಗೆ ತಾಕಿಸುವನು. ತನ್ನ ಆಯುಧಗಳಿಂದ ನಿನ್ನ ಗೋಪುರಗಳನ್ನು ಕೆಡವಿಬಿಡುವನು.