Ezekiel 27:19 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅಲ್ಲದೆ ಊಜಾಲಿನ ದ್ರಾಕ್ಷಾರಸವನ್ನು, ಉಕ್ಕನ್ನು, ದಾಲ್ಚಿನ್ನಿ ಮತ್ತು ಕಬ್ಬನ್ನು ಆ ವಸ್ತುಗಳಿಗಾಗಿ ವ್ಯಾಪಾರ ಮಾಡಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ದಾನಿನವರೂ ಮತ್ತು ಯಾವಾನಿನವರೂ ಊಜಾಲಿನಿಂದ ನಾನಾ ಸರಕುಗಳನ್ನು ತಂದು ನಿನಗೆ ಒಪ್ಪಿಸಿದರು.ಕಬ್ಬಿಣ, ಬಜೆ, ಲವಂಗ, ಚಕ್ಕೆ ಇವುಗಳು ನಿನಗೆ ಆಮದಾಗುತ್ತಿದ್ದವು.
Kannada BSI Bible 2016
ದಾನ್ ಮತ್ತು ಯಾವಾನ್ ಸಹ ಹೋಗುವಾಗ ಬರುವಾಗ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು. ಮೆರಗುವ ಕಬ್ಬಿಣ ದಾಲ್ಚಿನ್ನಿ, ಬಜೆ ಇವುಗಳು ನಿನ್ನ ಸಂತೆಯಲ್ಲಿ ಇದ್ದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ವೆದಾನಿನವರೂ ಯಾವಾನಿನವರೂ ಊಜಾಲಿನಿಂದ ನಾನಾ ಸನುಗುಗಳನ್ನು ತಂದು ನಿನಗೆ ಒಪ್ಪಿಸಿದರು. ಉಕ್ಕುಬಜೆಲವಂಗಚಕ್ಕೆಗಳು ನಿನಗೆ ಆಮದಾದವು.
Kannada Bible (KNCL) BSI 2016
“ವೆದಾನಿನವರೂ, ಯಾವಾನಿನವರೂ ಉಜಾಲಿನಿಂದ ನಾನಾ ಸರಕುಗಳನ್ನು ತಂದು ನಿನಗೆ ಒಪ್ಪಿಸುತ್ತಿದ್ದರು. ಉಕ್ಕು, ಬಜೆ, ಲವಂಗ, ಚಕ್ಕೆಗಳು ನಿನಗೆ ಆಮದಾಗುತ್ತಿದ್ದವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ವೆದಾನ್ ಮತ್ತು ಯಾವಾನ್ ಊರುಗಳು ಹೋಗುವಾಗ ಬರುವಾಗ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು. ಮೆರಗುವ ಕಬ್ಬಿಣ, ದಾಲ್ಚಿನ್ನಿ, ಬಜೆ ಇವುಗಳು ನಿನ್ನ ಬಜಾರಿನಲ್ಲಿ ಇದ್ದವು.