Ezekiel 27:32 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“‘ಅಳುತ್ತಾ ನಿನಗೆ ಈ ಶೋಕಗೀತೆಯನ್ನು ಹಾಡುವರು: “‘ತೂರಿನಂತೆ ಯಾರಿಲ್ಲ. ಆದರೆ ತೂರ್ ಹಾಳಾಗಿಹೋಯಿತು, ಸಮುದ್ರ ಮಧ್ಯದಲ್ಲಿ ನಾಶವಾಯಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ರೋದನ ಮಾಡುತ್ತಾ ನಿನ್ನ ವಿಷಯವಾಗಿ ಶೋಕ ಗೀತವನ್ನೆತ್ತಿ ಹೀಗೆ ಪ್ರಲಾಪಿಸುವರು, ‘ಸಮುದ್ರದ ನಡುವೆ ಹಾಳಾಗಿರುವ ತೂರಿಗೆ ಯಾವ ಪಟ್ಟಣ ಸಮಾನವಾಗಿದೆ?’
Kannada BSI Bible 2016
ಅವರು ಗೋಳಾಡುತ್ತಾ ನಿನ್ನ ವಿಷಯವಾಗಿ ಶೋಕ ಗೀತವನ್ನೆತ್ತಿ ಹೀಗೆ ಪ್ರಲಾಪಿಸುವರು--ಸಮುದ್ರದ ನಡುವೆ ಹಾಳಾಗಿರುವ ತೂರಿನಂತ ಪಟ್ಟಣ ಯಾವದು?
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ರೋದನಮಾಡುತ್ತಾ ನಿನ್ನ ವಿಷಯವಾಗಿ ಶೋಕಗೀತವನೆತ್ತಿ ಹೀಗೆ ಪ್ರಲಾಪಿಸುವರು - ಸಮುದ್ರದ ನಡುವೆ ಬಿಕೋ ಎನ್ನುವ ತೂರಿಗೆ ಯಾವದು ಸಮಾನ?
Kannada Bible (KNCL) BSI 2016
ರೋಧಿಸುವರು, ಪ್ರಲಾಪಿಸುವರು, ಹಾಡುವರು ಶೋಕಗೀತೆಯನ್ನು; ಕಡಲ ನಡುವೆ ಬಿಕೋ ಎನ್ನುವ ಟೈರನ್ನು ಏತಕೆ ಹೋಲಿಸೋಣ? ಎಂದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಗೋಳಾಡುತ್ತಾ ನಿನ್ನ ವಿಷಯವಾಗಿ ಶೋಕಗೀತೆಯನ್ನೆತ್ತಿ ಹೀಗೆ ಪ್ರಲಾಪಿಸುವರು; “ಸಮುದ್ರದ ನಡುವೆ ಹಾಳಾಗಿರುವ ಟೈರ್‌ನಂಥ ಪಟ್ಟಣ ಯಾವುದು?”