Ezekiel 27:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಭೂಮಧ್ಯ ಸಮುದ್ರವು ನಿನ್ನ ಸುತ್ತಲೂ ಮೇರೆಯಂತಿದೆ. ನಿನ್ನನ್ನು ಕಟ್ಟಿದವರು ಅಂದವಾಗಿಯೇ ಕಟ್ಟಿದರು. ನಿನ್ನಿದ ಹೊರಡುವ ಹಡಗುಗಳಂತೆ ನೀನು ಸುಂದರವಾಗಿರುವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿನ್ನ ನೆಲೆಯು ಸಮುದ್ರದ ಮಧ್ಯವೇ; ನಿನ್ನನ್ನು ಕಟ್ಟಿದವರು ನಿನ್ನ ಸೌಂದರ್ಯವನ್ನು ಪರಿಪೂರ್ಣಗೊಳಿಸಿದರು.
Kannada BSI Bible 2016
ನಿನ್ನ ಮೇರೆಗಳು ಸಮುದ್ರದ ಮಧ್ಯದಲ್ಲಿವೆ, ನಿನ್ನನ್ನು ಕಟ್ಟಿದವರು ನಿನ್ನ ಸೌಂದರ್ಯ ವನ್ನು ಸಂಪೂರ್ಣಪಡಿಸಿದ್ದಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿನ್ನ ನೆಲೆಯು ಸಮುದ್ರಮಧ್ಯವೇ; ನಿನ್ನನ್ನು ಕಟ್ಟಿದವರು ನಿನ್ನ ಸೌಂದರ್ಯವನ್ನು ಪರಿಪೂರ್ಣಗೊಳಿಸಿದರು.
Kannada Bible (KNCL) BSI 2016
ನಿನ್ನ ನೆಲೆಯಿರುವುದು ಸಮುದ್ರಗಳ ನಡುವೆ ನಿನ್ನ ನಿರ್ಮಿಸಿಹರು ಸರ್ವಾಂಗ ಸುಂದರಿಯಾಗಿಯೇ!
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿನ್ನ ಮೇರೆಗಳು ಸಮುದ್ರದ ಮಧ್ಯದಲ್ಲಿವೆ. ನಿನ್ನನ್ನು ಕಟ್ಟಿದವರು ನಿನ್ನನ್ನು ಸರ್ವಾಂಗ ಸುಂದರಿಯನ್ನಾಗಿಸಿದ್ದಾರೆ.