Ezekiel 28:25 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನನ್ನ ಒಡೆಯನಾದ ಯೆಹೋವನು ಹೀಗೆ ಹೇಳಿದನು: “ಬೇರೆ ದೇಶಗಳಿಗೆ ನಾನು ಇಸ್ರೇಲರನ್ನು ಚದರಿಸಿದೆನು. ಆದರೆ ತಿರುಗಿ ಇಸ್ರೇಲರನೆಐಲ್ಲಾ ಒಟ್ಟುಗೂಡಿಸುವೆನು. ಆಗ ಆ ದೇಶದವರು ನಾನು ಪವಿತ್ರವಾದ ದೇವರೆಂದು ತಿಳಿದು ಆ ರೀತಿಯಾಗಿ ನನ್ನನ್ನು ನೋಡುವರು. ಆಗ ಇಸ್ರೇಲರು ತಮ್ಮ ದೇಶದಲ್ಲಿ ವಾಸಮಾಡುವರು. ಆ ದೇಶವನ್ನು ನನ್ನ ಸೇವಕನಾದ ಯಾಕೋಘನಿಗೆ ನಾನು ಕೊಟ್ಟಿದ್ದೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “‘ಜನಾಂಗಗಳಲ್ಲಿ ಚದುರಿ ಹೋಗಿರುವ ಇಸ್ರಾಯೇಲ್ ವಂಶದವರನ್ನು ನಾನು ಒಟ್ಟುಗೂಡಿಸಿ, ಎಲ್ಲಾ ಜನಾಂಗಗಳ ಕಣ್ಣೆದುರಿಗೆ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು. ಆಮೇಲೆ ಆ ಇಸ್ರಾಯೇಲ್ ವಂಶದವರು ನನ್ನ ಸೇವಕನಾದ ಯಾಕೋಬನಿಗೆ ನಾನು ಅನುಗ್ರಹಿಸಿದ ತಮ್ಮ ಸ್ವದೇಶದಲ್ಲಿ ವಾಸಿಸುವರು.
Kannada BSI Bible 2016
ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ಇಸ್ರಾಯೇಲ್ಯರ ಮನೆತನದವರನ್ನು ಚದರಿಹೋದ ಜನಾಂಗದಿಂದ ಒಂದುಗೂಡಿಸಿ ಅನ್ಯಜನಾಂಗಗಳ ಮುಂದೆ ಅವರಲ್ಲಿ ಪರಿಶುದ್ಧವಾದ ಮೇಲೆ ಇಸ್ರಾ ಯೇಲ್ಯರು ನನ್ನ ಸೇವಕನಾದ ಯಾಕೋಬನಿಗೆ ನಾನು ಅನುಗ್ರಹಿಸಿದ ತಮ್ಮ ದೇಶದಲ್ಲಿಯೇ ವಾಸಿಸುವರು;ಅವರು ನಿರ್ಭಯರಾಗಿ ಅಲ್ಲಿ ವಾಸಿಸುವರು; ಮನೆ ಗಳನ್ನು ಕಟ್ಟುವರು; ದ್ರಾಕ್ಷೇತೋಟಗಳನ್ನು ನೆಡುವರು; ಹೌದು, ಸುತ್ತಲಾಗಿ ಅವರನ್ನು ಅಸಡ್ಡೆ ಮಾಡಿದವರೆಲ್ಲರ ಮೇಲೆ ನಾನು ನ್ಯಾಯ ತೀರಿಸಿದ ಮೇಲೆ ಅವರು ನಿರ್ಭಯರಾಗಿ ವಾಸಿಸುವರು. ಕರ್ತನಾದ ನಾನೇ ಅವರ ದೇವರೆಂದು ತಿಳಿಯುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಜನಾಂಗಗಳಲ್ಲಿ ಚದರಿಹೋಗಿರುವ ಇಸ್ರಾಯೇಲ್ ವಂಶದವರನ್ನು ನಾನು ಒಟ್ಟುಗೂಡಿಸಿ ಎಲ್ಲಾ ಜನಾಂಗಗಳ ಕಣ್ಣೆದುರಿಗೆ ನನ್ನ ಗೌರವವನ್ನು ಕಾಪಾಡಿಕೊಂಡ ಮೇಲೆ ಆ ಇಸ್ರಾಯೇಲ್ ವಂಶದವರು ನನ್ನ ಸೇವಕನಾದ ಯಾಕೋಬನಿಗೆ ನಾನು ಅನುಗ್ರಹಿಸಿದ ತಮ್ಮ ಸ್ವದೇಶದಲ್ಲಿ ವಾಸಿಸುವರು.
Kannada Bible (KNCL) BSI 2016
ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಜನಾಂಗಗಳಲ್ಲಿ ಚದುರಿಹೋಗಿರುವ ಇಸ್ರಯೇಲ್ ವಂಶದವರನ್ನು ನಾನು ಒಟ್ಟುಗೂಡಿಸಿ, ಎಲ್ಲ ಜನಾಂಗಗಳ ಕಣ್ಣೆದುರಿಗೆ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು. ಆಮೇಲೆ ದಾಸ ಯಕೋಬನಿಗೆ ನಾನು ಅನುಗ್ರಹಿಸಿದ ಸ್ವಂತ ನಾಡಿನಲ್ಲಿ ವಾಸಿಸುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಜನಾಂಗಗಳಲ್ಲಿ ಚದರಿಹೋಗಿರುವ ಇಸ್ರಾಯೇಲ್ ವಂಶದವರನ್ನು ನಾನು ಒಟ್ಟುಗೂಡಿಸಿ, ಎಲ್ಲ ಜನಾಂಗಗಳ ಕಣ್ಣೆದುರಿಗೆ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು. ಆಮೇಲೆ ದಾಸ ಯಾಕೋಬನಿಗೆ ನಾನು ಅನುಗ್ರಹಿಸಿದ ಸ್ವಂತ ನಾಡಿನಲ್ಲಿ ವಾಸಿಸುವರು.