Ezekiel 28:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆ ಮನುಷ್ಯನು ನಿನ್ನನ್ನು ಕೊಂದುಹಾಕುವನು. ಆಗಲೂ ನೀನು “ನಾನು ದೇವರು” ಎಂದು ಹೇಳುವಿಯಾ? ಇಲ್ಲ. ಅವನು ನಿನ್ನನ್ನು ತನ್ನ ಅಊಕಾರದಲ್ಲಿರಿಸುವನು. ಆಗ ನೀನು ‘ಕೇವಲ ಮನುಷ್ಯನೇ’ ಎಂದು ತಿಳಿಯುವಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ನಿನ್ನನ್ನು ಸಂಹರಿಸುವವರ ಎದುರಿಗೆ ನಾನು ದೇವರು ಎಂದು ಹೇಳುವೆಯೋ? ನಿನ್ನನ್ನು ಸಂಹರಿಸುವವನ ಕೈಯಲ್ಲಿ ನೀನು ದೇವರಲ್ಲ, ನರಪ್ರಾಣಿಯೇ.
Kannada BSI Bible 2016
ನಿನ್ನನ್ನು ಕೊಲ್ಲಲು ಬರುವವನ ಮುಂದೆ ಇನ್ನು ನಾನು ದೇವರೆಂದು ಹೇಳುವಿಯೋ? ನಿನ್ನನ್ನು ಕೊಲ್ಲುವವನ ಕೈಯಲ್ಲಿ ನೀನು ದೇವರಲ್ಲ ನರ ಪ್ರಾಣಿಯೇ;
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ನಿನ್ನನ್ನು ಸಂಹರಿಸುವವನೆದುರಿಗೆ ನಾನು ದೇವರು ಎಂದು ಹೇಳುವಿಯಾ? ಹತಿಸುವವನ ಕೈಗೆ ನೀನು ಎಂದಿಗೂ ದೇವರಲ್ಲ, ನರಪ್ರಾಣಿಯೇ.
Kannada Bible (KNCL) BSI 2016
ನಿನ್ನನ್ನು ಸಂಹರಿಸುವವನೆದುರಿಗೆ ನಿಂತು, ‘ನಾನು ದೇವರು’ ಎಂದು ಹೇಳಬಲ್ಲೆಯಾ? ಹತಿಸುವವನ ಕೈಗೆ ನೀನು ಎಂದಿಗೂ ದೇವರಲ್ಲ, ನರಪ್ರಾಣಿಯೇ!
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿನ್ನನ್ನು ಕೊಲ್ಲಲು ಬರುವವನ ಮುಂದೆ ಇನ್ನು, “ನಾನು ದೇವರು,” ಎಂದು ಹೇಳುವೆಯೋ? ನಿನ್ನನ್ನು ಕೊಲ್ಲುವವನ ಕೈಯಲ್ಲಿ ನೀನು ದೇವರಲ್ಲ ನರಪ್ರಾಣಿಯೇ;