Ezekiel 29:6 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ಈಜಿಪ್ಟಿನಲ್ಲಿ ವಾಸಮಾಡುವವರೆಲ್ಲರೂ ನಾನು ಒಡೆಯನಾದ ಯೆಹೋವನು ಎಂದು ತಿಳಿದುಕೊಳ್ಳುವರು. ನಾನು ಯಾಕೆ ಹೀಗೆ ಮಾಡುತ್ತಿದ್ದೇನೆ? ಯಾಕೆಂದರೆ ಇಸ್ರೇಲಿನ ಜನರು ಈಜಿಪ್ಟಿನ ಸಹಾಯದ ಮೇಲೆ ಆತುಕೊಂಡರು. ಆದರೆ ಈಜಿಪ್ಟ್ ಪೊಳ್ಳು ಬೆತ್ತದಂತಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಐಗುಪ್ತದ ಸಕಲ ನಿವಾಸಿಗಳು ನಾನೇ ಯೆಹೋವನು ಎಂದು ತಿಳಿಯವರು. ಅವರು ಇಸ್ರಾಯೇಲ್ ವಂಶದವರಿಗೆ ದಂಟಿನ ಊರುಗೋಲಾಗಿದ್ದರು.
Kannada BSI Bible 2016
ಆಗ ಎಲ್ಲಾ ಐಗುಪ್ತದ ನಿವಾಸಿಗಳು ನಾನೇ ಕರ್ತನೆಂದು ತಿಳಿಯುವರು; ಅವರು ಇಸ್ರಾಯೇಲ್ಯರ ಮನೆತನದವರಿಗೆ ದಂಟಿನ ಊರು ಗೋಲಾಗಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಐಗುಪ್ತದ ಸಕಲ ನಿವಾಸಿಗಳು ಇಸ್ರಾಯೇಲ್ ವಂಶದವರಿಗೆ ತಾವು ಬರೀ ದಂಟಿನ ಊರುಗೋಲಾದೆವು ಎಂದು ನಾಚಿಕೆಪಟ್ಟು ನಾನೇ ಯೆಹೋವನು ಎಂಬದಾಗಿ ದೃಢಮಾಡಿಕೊಳ್ಳುವರು.
Kannada Bible (KNCL) BSI 2016
“ಆಗ ಈಜಿಪ್ಟಿನ ಸಕಲ ನಿವಾಸಿಗಳು, ‘ಇಸ್ರಯೇಲ್ ವಂಶದವರಿಗೆ ನಾವು ಬರೀ ದಂಟಿನ ಊರುಗೋಲಾದೆವು’ ಎಂದು ನಾಚಿಕೆಪಟ್ಟು ನಾನೇ ಸರ್ವೇಶ್ವರ ಎಂಬುದಾಗಿ ದೃಢಮಾಡಿಕೊಳ್ಳುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಎಲ್ಲಾ ಈಜಿಪ್ಟಿನ ನಿವಾಸಿಗಳು ನಾನೇ ಯೆಹೋವನೆಂದು ತಿಳಿಯುವರು. “ ‘ಅವರು ಇಸ್ರಾಯೇಲರ ಮನೆತನದವರಿಗೆ ದಂಟಿನ ಊರುಗೋಲಾಗಿದ್ದರು.