Ezekiel 3:23 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾನೆದ್ದು ಬಯಲು ಸೀಮೆಗೆ ಹೋದೆನು. ಕೆಬಾರ್ ನದಿಯ ಪಕ್ಕದಲ್ಲಿ ನಾನು ಕಂಡ ಮಹಿಮೆಯಂತಿದ್ದ ಯೆಹೋವನ ಮಹಿಮೆಯು ಅಲ್ಲಿ ಇತ್ತು. ನಾನು ನನ್ನ ಮುಖವನ್ನು ನೆಲಕ್ಕೆ ತಾಗಿಸಿ ಘಗ್ಗಿ ನಮಸ್ಕರಿಸಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಎದ್ದು ಬಯಲು ಸೀಮೆಗೆ ಹೊರಟುಹೋದೆನು. ಯೆಹೋವನ ಮಹಿಮೆಯು ಅಲ್ಲಿ ನಿಂತಿತ್ತು. ಅದು ಕೆಬಾರ್ ನದಿಯ ಹತ್ತಿರ ನಾನು ನೋಡಿದ ಮಹಿಮೆಯ ಪ್ರಕಾರವಾಗಿತ್ತು. ಅದನ್ನು ಕಂಡು ಅಡ್ಡಬಿದ್ದೆನು.
Kannada BSI Bible 2016
ಆಮೇಲೆ ನಾನು ಎದ್ದು ಬಯಲು ಸೀಮೆಯ ಕಡೆಗೆ ಹೋದೆನು; ಇಗೋ, ಕರ್ತನ ಮಹಿಮೆಯ ಅಲ್ಲಿ ನಿಂತಿದೆ. ಅದು ಕೆಬಾರ್ ನದಿಯ ಹತ್ತಿರ ನಾನು ನೋಡಿದ ಮಹಿಮೆಯ ಪ್ರಕಾರವಾಗಿದೆ. ಆಗ ನಾನು ಮುಖ ಕೆಳಗಾಗಿ ಬಿದ್ದೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನೆದ್ದು ಬೈಲುಸೀಮೆಗೆ ಹೊರಟುಹೋದಾಗ ಕೆಬಾರ್ ನದಿಯ ಹತ್ತಿರ ನನಗೆ ಮಹಿಮಾದ್ಭುತದರ್ಶನವು ಆದಂತೆ ಆಹಾ, ಅಲ್ಲಿಯೂ ಯೆಹೋವನ ಮಹಿಮೆಯು ಪ್ರತ್ಯಕ್ಷವಾಯಿತು. ಅದನ್ನು ನೋಡಿ ಅಡ್ಡಬಿದ್ದೆನು.
Kannada Bible (KNCL) BSI 2016
ನಾನೆದ್ದು ಬಯಲು ಪ್ರದೇಶಕ್ಕೆ ಹೊರಟುಬಂದಾಗ, ಕೆಬಾರ್ ನದಿಯ ಹತ್ತಿರ ನನಗೆ ಮಹಿಮಾದ್ಭುತ ದರ್ಶನವು ಆದಂತೆ, ಇಗೋ ಅಲ್ಲಿಯೂ ಸರ್ವೇಶ್ವರನ ಮಹಿಮೆ ಪ್ರತ್ಯಕ್ಷವಾಯಿತು. ಅದನ್ನು ನೋಡಿ ಅಡ್ಡಬಿದ್ದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಮೇಲೆ ನಾನು ಎದ್ದು ಬಯಲುಸೀಮೆಯ ಕಡೆಗೆ ಹೋದೆನು. ಯೆಹೋವ ದೇವರ ಮಹಿಮೆಯು ಅಲ್ಲಿ ನಿಂತಿತ್ತು. ಅದು ಕೆಬಾರ್ ನದಿಯ ಹತ್ತಿರ ನಾನು ನೋಡಿದ ಮಹಿಮೆಯ ಪ್ರಕಾರವಾಗಿತ್ತು. ಅದನ್ನು ಕಂಡು ನಾನು ಅಡ್ಡ ಬಿದ್ದೆನು.