Ezekiel 3:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವರು ಕಠಿಣರಾಗಿರುವಂತೆಯೇ ನಾನು ನಿನ್ನನ್ನೂ ಕಠಿಣಗೊಳಿಸುತ್ತೇನೆ. ನಿನಗೂ ಅವರಂತೆ ಮೊಂಡತನವನ್ನು ಕೊಡುವೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಗೋ, ನಾನು ಅವರ ಕಠಿಣ ಹೃದಯಕ್ಕೆ ವಿರುದ್ಧವಾಗಿ ನಿನ್ನ ಹೃದಯವನ್ನು ಕಠಿಣಪಡಿಸಿದ್ದೇನೆ; ಅವರ ಹಣೆಗೆ ಪ್ರತಿಯಾಗಿ ನಿನ್ನ ಹಣೆಯನ್ನು ಗಟ್ಟಿಮಾಡಿದ್ದೇನೆ.
Kannada BSI Bible 2016
ಇಗೋ, ನಾನು ನಿನ್ನ ಮುಖವನ್ನು ಅವರ ಮುಖಗಳ ಎದುರಿಗೆ ಕಠಿಣ ಮಾಡಿದ್ದೇನೆ; ಮತ್ತು ನಿನ್ನ ಹಣೆಯನ್ನು ಅವರ ಹಣೆಗಳ ಎದುರಾಗಿ ಬಲಪಡಿಸಿದ್ದೇನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಗೋ, ಅವರ ಕಠಿನ ಮುಖಕ್ಕೆ ವಿರುದ್ಧವಾಗಿ ನಿನ್ನ ಮುಖವನ್ನು ಕಠಿನಪಡಿಸಿದ್ದೇನೆ; ಅವರ ಹಣೆಗೆ ಪ್ರತಿಯಾಗಿ ನಿನ್ನ ಹಣೆಯನ್ನು ಗಟ್ಟಿಮಾಡಿದ್ದೇನೆ.
Kannada Bible (KNCL) BSI 2016
ಇಗೋ, ಅವರ ಕಠಿಣ ಹೃದಯಕ್ಕೆ ವಿರುದ್ಧ ನಿನ್ನ ಹೃದಯವನ್ನು ಕಠಿಣಪಡಿಸಿದ್ದೇನೆ; ಅವರ ಹಟಮಾರಿತನಕ್ಕೆ ಪ್ರತಿಯಾಗಿ ನಿನ್ನನ್ನು ಹಟವಾದಿಯನ್ನಾಗಿ ಮಾಡಿದ್ದೇನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ನಾನು ನಿನ್ನ ಮುಖವನ್ನು ಅವರ ಮುಖಗಳ ಎದುರಿಗೆ ಕಠಿಣ ಮಾಡಿದ್ದೇನೆ. ಅವರ ಹಟಮಾರಿತನಕ್ಕೆ ಪ್ರತಿಯಾಗಿ, ನಿನ್ನನ್ನು ಹಟವಾದಿಯನ್ನಾಗಿಸುವೆನು.