Ezekiel 30:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಈಜಿಪ್ಟಿಗೆ ವಿರುದ್ಧವಾಗಿ ಒಂದು ಖಡ್ಗವು ಬರುವದು! ಈಜಿಪ್ಟ್ ಬೀಳುವಾಗ ಇಥಿಯೋಪ್ಯವು ಭಯದಿಂದ ನಡುಗುವದು. ಬಾಬಿಲೋನಿನ ಸೈನ್ಯವು ಈಜಿಪ್ಟಿನವರನ್ನು ಸೆರೆ ಹಿಡಿದುಕೊಂಡು ಹೋಗುವದು. ಈಜಿಪ್ಟಿನ ಅಡಿಪಾಯಗಳು ಒಡೆದುಹೋಗುವವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಖಡ್ಗವು ಐಗುಪ್ತದ ಮೇಲೆ ಬೀಳುವುದು; ಅಲ್ಲಿನ ಪ್ರಜೆಗಳು ಹತರಾಗಲು ಕೂಷಿನಲ್ಲಿಯೂ ಸಂಕಟವಾಗುವುದು; ಐಗುಪ್ತದ ಜನಸಮೂಹವು ಒಯ್ಯಲ್ಪಡುವುದು, ಅದರ ಅಸ್ತಿವಾರವು ಮುರಿದು ಹಾಳಾಗುವುದು.
Kannada BSI Bible 2016
ಕತ್ತಿಯು ಐಗುಪ್ತದ ಮೇಲೆ ಬರುವದು, ಅಲ್ಲಿನ ಪ್ರಜೆಗಳು ಹತರಾಗಲು ಐಥಿಯೋಪ್ಯ ದಲ್ಲಿಯೂ ಸಂಕಟವಾಗುವದು; ಐಗುಪ್ತದ ಜನಸಮೂ ಹವು ಒಯ್ಯಲ್ಪಡುವದು ಅದರ ಅಸ್ತಿವಾರವು ಮುರಿದು ಹಾಳಾಗುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಖಡ್ಗವು ಐಗುಪ್ತದ ಮೇಲೆ ಬೀಳುವದು; ಅಲ್ಲಿನ ಪ್ರಜೆಗಳು ಹತರಾಗಲು ಕೂಷಿನಲ್ಲಿಯೂ ಸಂಕಟವಾಗುವದು; ಐಗುಪ್ತದ ಲಕ್ಷೋಪಲಕ್ಷ ಪ್ರಜೆಯು ಒಯ್ಯಲ್ಪಡುವದು; ಅದರ ಅಸ್ತಿವಾರವು ಹಾಳಾಗುವದು;
Kannada Bible (KNCL) BSI 2016
ಖಡ್ಗವು ಈಜಿಪ್ಟಿನ ಮೇಲೆ ಬೀಳುವುದು; ಅಲ್ಲಿ ಪ್ರಜೆಗಳು ಹತರಾಗಲು ಸುಡಾನಿನಲ್ಲಿಯೂ ಸಂಕಟವಾಗುವುದು; ಈಜಿಪ್ಟಿನಲ್ಲಿ ಹಲವರು ಸತ್ತುಬೀಳುವರು, ಅದರ ಅಸ್ತಿಭಾರ ಹಾಳಾಗುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಖಡ್ಗವು ಈಜಿಪ್ಟಿಗೆ ವಿರುದ್ಧವಾಗಿ ಬರುವುದು. ಕೂಷ್ ಪಟ್ಟಣವು ಸಂಕಟಪಡುವುದು. ಈಜಿಪ್ಟಿನಲ್ಲಿ ಕೊಲ್ಲಲಾದವರು ಬಿದ್ದಾಗ, ಅವಳ ಸಂಪತ್ತು ಸೂರೆಯಾಗುವುದು. ಅವಳ ಅಡಿಪಾಯಗಳು ಕಿತ್ತುಹೋಗುವವು.