Ezekiel 30:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದನು: “ಈಜಿಪ್ಟಿಗೆ ಸಹಾಯ ಮಾಡುವವನು ಬೀಳುವನು. ಅವಳು ಹೆಮ್ಮೆಪಡುವ ಸಾಮರ್ಥ್ಯ ಅಂತ್ಯವಾಗುವದು. ಈಜಿಪ್ಟಿನಲ್ಲಿರುವ ಜನರು ರಣರಂಗದಲ್ಲಿ ಮಿಗ್ದೋಲ್‌ನಿಂದ ಹಿಡಿದು ಅಸಾಬನ್ ತನಕ ಸಾಯುವರು.” ಇದು ನನ್ನ ಒಡೆಯನಾದ ಯೆಹೋವನ ನುಡಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು ಇಂತೆನ್ನುತ್ತಾನೆ, “ಐಗುಪ್ತಕ್ಕೆ ಆಧಾರವಾದವರು ಬೀಳುವರು, ಅದರ ಶಕ್ತಿಯ ಅಹಂಕಾರವು ಇಳಿದು ಹೋಗುವುದು; ಅಲ್ಲಿನ ಜನರು ಮಿಗ್ದೋಲಿನಿಂದ ಸೆವೇನೆಯವರೆಗೆ ಖಡ್ಗದಿಂದ ಹತರಾಗುವರು” ಇದು ಕರ್ತನಾದ ಯೆಹೋವನ ನುಡಿ.
Kannada BSI Bible 2016
ಕರ್ತನು ಹೀಗೆ ಹೇಳುತ್ತಾನೆ--ಐಗುಪ್ತಕ್ಕೆ ಆಧಾರ ವಾದವರು ಬೀಳುವರು. ಅದರ ಶಕ್ತಿಯ ಮದವು ಇಳಿದು ಹೋಗುವದು. ಅಲ್ಲಿನ ಜನರು ಮಿಗ್ದೋಲಿ ನಿಂದ ಸೆವೇನೆಯ ಗೋಪುರ ಮೊದಲುಗೊಂಡು ಅವರಲ್ಲಿ ಕತ್ತಿಯಿಂದ ಹತರಾಗುವರು ಎಂದು ದೇವ ರಾದ ಕರ್ತನು ಹೇಳುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ಇಂತೆನ್ನುತ್ತಾನೆ - ಐಗುಪ್ತಕ್ಕೆ ಆಧಾರವಾದವರು ಬೀಳುವರು, ಅದರ ಶಕ್ತಿಮದವು ಇಳಿದುಹೋಗುವದು; ಅಲ್ಲಿನ ಜನರು ವಿುಗ್ದೋಲಿನಿಂದ ಸೆವೇನೆಯವರೆಗೆ ಖಡ್ಗದಿಂದ ಹತರಾಗುವರು; ಇದು ಕರ್ತನಾದ ಯೆಹೋವನ ನುಡಿ.
Kannada Bible (KNCL) BSI 2016
ಸರ್ವೇಶ್ವರ ಇಂತೆನ್ನುತ್ತಾರೆ - “ಈಜಿಪ್ಟಿಗೆ ಆಧಾರವಾದವರು ಬೀಳುವರು, ಅದರ ಶಕ್ತಿ ಮದವು ಇಳಿದುಹೋಗುವುದು; ಅಲ್ಲಿನ ಜನರು ಮಿಗ್ದೋಲಿನಿಂದ ಸೆವೇನೆಯವರೆಗೆ ಖಡ್ಗದಿಂದ ಹತರಾಗುವರು. ಇದು ಸರ್ವೇಶ್ವರನಾದ ದೇವರ ನುಡಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ ‘ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಈಜಿಪ್ಟಿನ ಸಹಾಯಕರು ಬೀಳುವರು. ಅದರ ಶಕ್ತಿಯ ಮದವು ಇಳಿದುಹೋಗುವುದು. ಅಲ್ಲಿಯ ಜನರು ಮಿಗ್ದೋಲಿನಿಂದ ಸೆವೇನೆಯ ಗೋಪುರದವರೆಗೆ ಖಡ್ಗದಿಂದ ಹತರಾಗುವರು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.