Ezekiel 31:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾನು ಅದಕ್ಕೆ ಅನೇಕ ಕೊಂಬೆಗಳನ್ನು ಕೊಟ್ಟು ಅಂದವಾಗಿ ಕಾಣುವಂತೆ ಮಾಡಿದೆನು. ದೇವರ ತೋಟವಾಗಿರುವ ಏದೆನಿನಲ್ಲಿರುವ ಮರಗಳೆಲ್ಲಾ ಅಸೂಯೆಪಡುತ್ತಿದ್ದವು.’“
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಅದನ್ನು ಅದರ ಕೊಂಬೆಗಳ ಸಮೂಹದಿಂದ ಸುಂದರಗೊಳಿಸಿದೆನು; ದೇವರ ಉದ್ಯಾನವಾದ ಏದೆನಿನ ಸಕಲ ವೃಕ್ಷಗಳೂ ಅದರ ಮೇಲೆ ಅಸೂಯೆಪಡುತ್ತಿದ್ದವು.”
Kannada BSI Bible 2016
ನಾನು ಅವನನ್ನು ಅವನ ಕೊಂಬೆಗಳ ಸಮೂಹದಿಂದ ಸೌಂದರ್ಯಪಡಿಸಿದೆನು; ಅದರಿಂದ ದೇವರ ತೋಟ ದಲ್ಲಿನ ಏದೆನಿನ ಮರಗಳೆಲ್ಲಾ ಅವನ ಮೇಲೆ ಹೊಟ್ಟೇ ಕಿಚ್ಚುಪಟ್ಟವು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಅದನ್ನು ಬಹು ಶಾಖೋಪಶಾಖೆಗಳಿಂದ ಅಂದಗೊಳಿಸಿದೆನು; ದೇವರ ಉದ್ಯಾನವಾದ ಏದೆನಿನ ಸಕಲವೃಕ್ಷಗಳೂ ಅದಕ್ಕೆ ಅಸೂಯೆಪಡುತ್ತಿದ್ದವು.
Kannada Bible (KNCL) BSI 2016
ನಾನದನು ಅಷ್ಟೊಂದು ಸುಂದರಗೊಳಿಸಿದ್ದೆ ಶಾಖೋಪಶಾಖೆಗಳಿಂದ ಅಸೂಯೆಪಡುತ್ತಿದ್ದವು ಏದೇನಿನ ದೇವೋದ್ಯಾನದ ವೃಕ್ಷಗಳೆಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಅದನ್ನು ಅದರ ಕೊಂಬೆಗಳ ಸಮೂಹದಿಂದ ಸುಂದರಗೊಳಿಸಿದೆನು. ಅದರಿಂದ ದೇವರ ತೋಟದಲ್ಲಿನ ಏದೆನಿನ ಮರಗಳೆಲ್ಲಾ ಅದರ ಮೇಲೆ ಹೊಟ್ಟೆಕಿಚ್ಚು ಪಟ್ಟವು.