Ezekiel 32:23 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
See verse 22
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರ ಗೋರಿಗಳು ಅಧೋಲೋಕದ ಅಗಾಧ ಸ್ಥಳಗಳಲ್ಲಿ ಹರಡಿಕೊಂಡಿವೆ; ಸಂಹೃತರಾದವರು, ಖಡ್ಗದಿಂದ ಹತರಾದವರು ಗೋರಿಯ ಸುತ್ತಲಿದ್ದಾರೆ; ಜೀವಲೋಕದಲ್ಲಿ ಹತರಾದವರು ಜೀವಿತರ ದೇಶದಲ್ಲಿ ಭಯವನ್ನು ಉಂಟುಮಾಡಿದ್ದಾರೆ.
Kannada BSI Bible 2016
ಅವರ ಸಮಾಧಿಗಳು ಕುಣಿಯ ಕಡೆಗಳಲ್ಲಿ ಇಡಲ್ಪಟ್ಟಿವೆ, ಅದರ ಸಮಾಧಿಯ ಸುತ್ತಲೂ ಅವರ ಗುಂಪುಗಳಿವೆ. ಜೀವಿತರ ದೇಶದಲ್ಲಿ ಭಯಂಕ ರರಾಗಿದ್ದ ಇವರೆಲ್ಲರೂ ಕತ್ತಿಯಿಂದ ಬಿದ್ದು ಹತರಾ ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರ ಗೋರಿಗಳು ಅಧೋಲೋಕದ ಅಗಾಧಸ್ಥಳಗಳಲ್ಲಿ ಹರಡಿಕೊಂಡಿವೆ; ಅಶ್ಶೂರದವರು ಅಶ್ಶೂರದ ಗೋರಿಯ ಸುತ್ತಲಿದ್ದಾರೆ; ಜೀವಲೋಕದಲ್ಲಿ ಭೀಕರರಾಗಿದ್ದ ಇವರೆಲ್ಲರೂ ಸಂಹೃತರು, ಖಡ್ಗಹತರು.
Kannada Bible (KNCL) BSI 2016
ಅವರ ಗೋರಿಗಳು ಅಧೋಲೋಕದ ಅಗಾಧ ಸ್ಥಳಗಳಲ್ಲಿ ಹರಡಿಕೊಂಡಿವೆ; ಅವರು ಅಸ್ಸೀರಿಯದ ಗೋರಿಯ ಸುತ್ತಲಿದ್ದಾರೆ; ಜೀವಲೋಕದಲ್ಲಿ ಭೀಕರವಾಗಿದ್ದ ಇವರೆಲ್ಲರೂ ಸಂಹೃತರು, ಖಡ್ಗಹತರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರ ಸಮಾಧಿಗಳು ಕುಳಿಯ ಕಡೆಗಳಲ್ಲಿ ಇಡಲಾಗಿವೆ. ಅವಳ ಸೇನೆಯು ಸಮಾಧಿಯ ಸುತ್ತಲೂ ಇವೆ. ಜೀವಿತರ ದೇಶದಲ್ಲಿ ಭಯವನ್ನು ಹರಡಿದವರೆಲ್ಲರೂ ಖಡ್ಗದಿಂದ ಹತರಾದರು.