Ezekiel 33:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ನರಪುತ್ರನೇ, ನಿನ್ನ ಜನರಿಗೆ ಹೀಗೆ ಹೇಳು: ‘ಒಬ್ಬನು ಒಳ್ಳೆಯವನಾಗಿದ್ದುಕೊಂಡು ನಂತರ ದುಷ್ಟತನವನ್ನು ನಡಿಸಿದರೆ ಅವನ ಸತ್ಕಾರ್ಯಗಳು ಅವನನ್ನು ರಕ್ಷಿಸಲಾರವು. ಒಬ್ಬನು ದುಷ್ಕೃತ್ಯಗಳನ್ನು ಮಾಡಿ ತನ್ನ ದುಷ್ಟತಬದಿಂದ ತಿರುಗಿದರೆ ಅವನು ನಾಶವಾಗುವದಿಲ್ಲ. ಆದ್ದರಿಂದ ಹಿಂದೆ ಮಾಡಿದ್ದ ಪುಣ್ಯಕಾರ್ಯಗಳು ಒಬ್ಬ ಪಾಪಿಯನ್ನು ರಕ್ಷಿಸಲಾರದೆಂಬುದನ್ನು ಜ್ಞಾಪಕದಲ್ಲಿಟ್ಟುಕೊ.’
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನರಪುತ್ರನೇ, ನಿನ್ನ ಜನರಿಗೆ ಹೀಗೆ ಹೇಳು, “ನೀತಿವಂತನು ದ್ರೋಹಮಾಡಿದ್ದಲ್ಲಿ ಅವನ ನೀತಿಯು ಅವನನ್ನು ಉದ್ಧರಿಸುವುದಿಲ್ಲ; ದುಷ್ಟನು ತನ್ನ ದುಷ್ಟತನವನ್ನು ಬಿಟ್ಟಲ್ಲಿ, ಅವನ ಪಾಪವು ಅವನನ್ನು ಬೀಳಿಸುವುದಿಲ್ಲ; ನೀತಿವಂತನು ಪಾಪಮಾಡಿದಲ್ಲಿ ಅವನ ನೀತಿಯು ಅವನನ್ನು ಬದುಕಿಸುವುದಿಲ್ಲ.
Kannada BSI Bible 2016
ಮನುಷ್ಯ ಪುತ್ರನೇ. ನೀನು ನಿನ್ನ ಜನರ ಮಕ್ಕಳಿಗೆ ಹೇಳು--ನೀತಿವಂತನ ನೀತಿಯು ಅವನ ಅಪರಾಧದ ದಿನದಲ್ಲಿ ಅವನನ್ನು ತಪ್ಪಿಸುವದಿಲ್ಲ; ಹಾಗೆಯೇ ದುಷ್ಟನ ದುಷ್ಟತ್ವವು ಅವನು ತನ್ನ ದುಷ್ಟತ್ವವನ್ನು ಬಿಟ್ಟು ತಿರುಗುವ ದಿನದಲ್ಲಿ ಅದರಿಂದ ಬೀಳುವದಿಲ್ಲ; ನೀತಿವಂತನು ಪಾಪಮಾಡುವ ದಿನದಲ್ಲಿ ನೀತಿಯಿಂದ ಬದುಕ ಲಾರನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನರಪುತ್ರನೇ, ಜನರಿಗೆ ಹೀಗೆ ಹೇಳು - ಶಿಷ್ಟನು ದ್ರೋಹಮಾಡಿದ್ದಲ್ಲಿ ಅವನ ಪುಣ್ಯವು ಅವನನ್ನು ಉದ್ಧರಿಸದು; ದುಷ್ಟನು ತನ್ನ ದುಷ್ಟತನವನ್ನು ಬಿಟ್ಟಲ್ಲಿ ಅವನ ಪಾಪವು ಅವನನ್ನು ಬೀಳಿಸದು; ಶಿಷ್ಟನು ಪಾಪಮಾಡಿದಲ್ಲಿ ಅವನ ಪುಣ್ಯವು ಅವನನ್ನು ಉಳಿಸಲಾರದು.
Kannada Bible (KNCL) BSI 2016
“ನರಪುತ್ರನೇ, ನಿನ್ನ ಜನರಿಗೆ ಹೀಗೆ ಹೇಳು: ಶಿಷ್ಟನು ದ್ರೋಹಮಾಡಿದ್ದಲ್ಲಿ ಅವನ ಪುಣ್ಯ ಅವನನ್ನು ಉದ್ಧರಿಸದು; ದುಷ್ಟನು ತನ್ನ ದುಷ್ಟತನವನ್ನು ಬಿಟ್ಟಲ್ಲಿ ಅವನ ಪಾಪ ಅವನನ್ನು ಬೀಳಿಸದು; ಶಿಷ್ಟನು ಪಾಪಮಾಡಿದಲ್ಲಿ ಅವನ ಪುಣ್ಯ ಅವನನ್ನು ಉಳಿಸಲಾರದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಆದ್ದರಿಂದ, ನರಪುತ್ರನೇ, ನೀನು ನಿನ್ನ ಜನರ ಮಕ್ಕಳಿಗೆ ಹೇಳು: ‘ಒಬ್ಬ ನೀತಿವಂತನು ಅವಿಧೇಯನಾದರೆ, ಆ ವ್ಯಕ್ತಿಯ ಹಿಂದಿನ ನೀತಿಯು ಯಾವುದಕ್ಕೂ ಲೆಕ್ಕವಿಲ್ಲ. ಹಾಗೆಯೇ ದುಷ್ಟನು ಪಶ್ಚಾತ್ತಾಪಪಟ್ಟರೆ, ಆ ವ್ಯಕ್ತಿಯ ಹಿಂದಿನ ದುಷ್ಟತನವು ಖಂಡನೆಯನ್ನು ತರುವುದಿಲ್ಲ. ಪಾಪಮಾಡುವ ನೀತಿವಂತನು ಹಿಂದೆ ನೀತಿವಂತರಾಗಿದ್ದರೂ ಬದುಕಲು ಬಿಡುವುದಿಲ್ಲ.’