Ezekiel 33:16 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವನು ಹಿಂದೆ ಮಾಡಿದ ದುಷ್ಕೃತ್ಯಗಳನ್ನು ನಾನು ನನ್ನ ನೆನಪಿಗೆ ತರುವದಿಲ್ಲ. ಯಾಕೆಂದರೆ ಈಗ ಅವನು ಶಿಷ್ಟನಾಗಿ ಬಾಳುತ್ತಿದ್ದಾನೆ. ಆದುದರಿಂದ ಅವನು ಜೀವಿಸುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ಮಾಡಿದ ಯಾವ ಪಾಪವೂ ಅವನ ಲೆಕ್ಕಕ್ಕೆ ಸೇರಿಸಲ್ಪಡುವುದಿಲ್ಲ; ನೀತಿನ್ಯಾಯಗಳನ್ನು ನಡೆಸುತ್ತಿದ್ದುದರಿಂದ ನಿಶ್ಚಯವಾಗಿ ಬದುಕುವನು.
Kannada BSI Bible 2016
ಅವನು ಮಾಡಿರುವ ಪಾಪ ಗಳಲ್ಲಿ ಒಂದಾದರೂ ಅವನಿಗೆ ವಿರೋಧವಾಗಿ ಜ್ಞಾಪ ಕಕ್ಕೆ ಬರುವದಿಲ್ಲ; ಅವನು ನ್ಯಾಯವನ್ನೂ ನೀತಿ ಯನ್ನೂ ಮಾಡಿದ್ದರಿಂದ ನಿಶ್ಚಯವಾಗಿ ಬದುಕುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ಮಾಡಿದ ಯಾವ ಪಾಪವೂ ಅವನ ಲೆಕ್ಕಕ್ಕೆ ಸೇರಿಸಲ್ಪಡದು; ನೀತಿನ್ಯಾಯಗಳನ್ನು ನಡಿಸುತ್ತಿದ್ದಾನಲ್ಲಾ; ಬಾಳೇಬಾಳುವನು.
Kannada Bible (KNCL) BSI 2016
ಅವನು ಮಾಡಿದ ಯಾವ ಪಾಪವೂ ಅವನ ಲೆಕ್ಕಕ್ಕೆ ಸೇರದು; ನ್ಯಾಯನೀತಿಗಳನ್ನು ನಡೆಸುತ್ತಿರುವುದರಿಂದ ಅವನು ಬಾಳೇ ಬಾಳುವನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ಮಾಡಿದ ಪಾಪಗಳಲ್ಲಿ ಒಂದಾದರೂ ಅವನ ಲೆಕ್ಕಕ್ಕೆ ಸೇರಿಸಲಾಗುವುದಿಲ್ಲ. ಅವನು ನ್ಯಾಯವನ್ನೂ ನೀತಿಯನ್ನೂ ಮಾಡಿದ್ದರಿಂದ ನಿಶ್ಚಯವಾಗಿ ಬದುಕುವನು.