Ezekiel 33:22 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವನು ಬರುವ ಹಿಂದಿನ ದಿವಸದ ಸಾಯಂಕಾಲ ನನ್ನ ಒಡೆಯನಾದ ಯೆಹೋವನ ಆತ್ಮನಿಂದ ಪರವಶನಾದೆನು. ದೇವರು ನನ್ನನ್ನು ಮಾತನಾಡದಂತೆ ಮಾಡಿದ್ದನು. ಆ ಸಮಯದಲ್ಲಿ ಆ ಮನುಷ್ಯನು ನನ್ನ ಬಳಿಗೆ ಬಂದನು. ಆಗ ದೇವರು ನನ್ನ ಬಾಯನ್ನು ತೆರೆದು ನಾನು ಮಾತನಾಡುವಂತೆ ಮಾಡಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ಬರುವುದಕ್ಕಿಂತ ಮೊದಲೇ, ಸಾಯಂಕಾಲದಲ್ಲಿ ನಾನು ಯೆಹೋವನ ಹಸ್ತಸ್ಪರ್ಶದಿಂದ ಪರವಶನಾಗಿರಲು, ಯೆಹೋವನು ತಪ್ಪಿಸಿಕೊಂಡವನು ಬೆಳಿಗ್ಗೆ ನನ್ನ ಬಳಿಗೆ ಬರುವ ತನಕ ನನ್ನ ಬಾಯಿ ತೆರೆಯಲ್ಪಟ್ಟಿತ್ತು; ಹೌದು, ನನ್ನ ಬಾಯಿ ತೆರೆದಿತ್ತು, ನಾನು ಮೂಕನಾಗಿರಲಿಲ್ಲ.
Kannada BSI Bible 2016
ಆಗ ಅವನು ತಪ್ಪಿಸಿಕೊಂಡು ಬರುವ ದಕ್ಕಿಂತ ಮೊದಲೇ, ಸಾಯಂಕಾಲದಲ್ಲಿ ಕರ್ತನ ಕೈ ನನ್ನ ಮೇಲೆ ಇತ್ತು. ಅವನು ಮುಂಜಾನೆ ನನ್ನ ಬಳಿಗೆ ಬರುವ ತನಕ ನನ್ನ ಬಾಯಿ ತೆರೆಯಲ್ಪಟ್ಟಿದೆ; ನನ ಬಾಯಿ ತೆರೆದಿತ್ತು. ನಾನು ಮೂಕನಾಗಿರಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ಬರುವದಕ್ಕೆ ಹಿಂದಿನ ಸಾಯಂಕಾಲ ನಾನು ಯೆಹೋವನ ಹಸ್ತಸ್ಪರ್ಶದಿಂದ ಪರವಶನಾಗಿರಲು ಯೆಹೋವನು ಆ ಪಲಾಯಿತನು ಬೆಳಿಗ್ಗೆ ಬರುವನೆಂದು ನನ್ನ ಬಾಯನ್ನು ಬಿಚ್ಚಿದ್ದನು; ಹೌದು, ನನ್ನ ಬಾಯಿ ಬಿಚ್ಚಿತು, ನನ್ನ ಮೂಕತನವು ಹೋಯಿತು.
Kannada Bible (KNCL) BSI 2016
ಅವನು ಬರುವುದಕ್ಕೆ ಹಿಂದಿನ ಸಾಯಂಕಾಲ ನಾನು ಸರ್ವೇಶ್ವರನ ಹಸ್ತಸ್ಪರ್ಶದಿಂದ ಪರವಶನಾಗಿದ್ದೆ. ಆ ಪಲಾಯಿತನು ಬೆಳಿಗ್ಗೆ ಬರುವನೆಂದು ಸರ್ವೇಶ್ವರ ನನ್ನ ಬಾಯನ್ನು ಬಿಚ್ಚಿದರು; ಹೌದು ನನ್ನ ಬಾಯಿ ಬಿಚ್ಚಿತ್ತು, ನನ್ನ ಮೂಕತನ ಹೋಗಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವನು ತಪ್ಪಿಸಿಕೊಂಡು ಬರುವುದಕ್ಕಿಂತ ಮೊದಲೇ, ಸಾಯಂಕಾಲದಲ್ಲಿ ಯೆಹೋವ ದೇವರ ಕೈ ನನ್ನ ಮೇಲೆ ಇತ್ತು. ಅವನು ಮುಂಜಾನೆ ನನ್ನ ಬಳಿಗೆ ಬರುವ ತನಕ ನನ್ನ ಬಾಯಿ ತೆರೆಯಲಾಗಿತ್ತು. ನನ್ನ ಬಾಯಿ ತೆರೆದಿತ್ತು. ನಾನು ಮೌನವಾಗಿರಲಿಲ್ಲ.