Ezekiel 34:30 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ನಾನು ಅವರ ದೇವರೆಂದೂ ನಾನು ಅವರೊಂದಿಗೆ ಇದ್ದೇನೆ ಎಂದೂ ಅವರು ತಿಳಿದುಕೊಳ್ಳುವರು. ಇಸ್ರೇಲ್ ಜನಾಂಗವು ಸಹ ತಾವು ನನ್ನ ಜನರು ಎಂದು ತಿಳಿದುಕೊಳ್ಳುವರು.” ಇದು ಒಡೆಯನಾದ ಯೆಹೋವನ ನುಡಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“‘ಆಗ ಅವರು ತಮ್ಮ ದೇವರಾದ ಯೆಹೋವನೆಂಬ ನಾನು ತಮ್ಮೊಂದಿಗೆ ಇದ್ದೇನೆಂತಲೂ, ಇಸ್ರಾಯೇಲ್ ವಂಶದವರಾದ ತಾವು ತನ್ನ ಜನರಾಗಿದ್ದೇವೆಂತಲೂ ತಿಳಿದುಕೊಳ್ಳುವರು’” ಇದು ಕರ್ತನಾದ ಯೆಹೋವನ ನುಡಿ.
Kannada BSI Bible 2016
ಆಗ ಅವರು ತಮ್ಮ ಕರ್ತನಾದ ದೇವರೆಂಬ ನಾನೇ ಅವರ ಸಂಗಡ ಇರುವೆನೆಂದೂ ಇಸ್ರಾಯೇಲಿನ ಮನೆತನದವರಾದ ಅವರೇ ನನ್ನ ಜನರಾಗಿರುವರೆಂದೂ ತಿಳಿಯುವರು ಎಂದು ದೇವರಾದ ಕರ್ತನು ಹೇಳುತ್ತಾನೆ.ನನ್ನ ಕುರಿಗಳೂ ನನ್ನ ಮೇವಿನ ಮಂದೆಯೂ ಆಗಿರುವ ನೀವು ನರಪ್ರಾಣಿಗಳು. ನಾನು ನಿಮ್ಮ ದೇವರು ಎಂದು ದೇವರಾದ ಕರ್ತನು ಹೇಳುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಅವರು ತಮ್ಮ ದೇವರಾದ ಯೆಹೋವನೆಂಬ ನಾನು ತಮ್ಮೊಂದಿಗಿದ್ದೇನೆಂತಲೂ ಇಸ್ರಾಯೇಲ್ ವಂಶದವರಾದ ತಾವು ನನ್ನ ಜನರಾಗಿದ್ದೇವೆಂತಲೂ ನಿಶ್ಚಯಿಸಿಕೊಳ್ಳುವರು; ಇದು ಕರ್ತನಾದ ಯೆಹೋವನ ನುಡಿ.
Kannada Bible (KNCL) BSI 2016
ಆಗ ಅವರು ತಮ್ಮ ದೇವರಾದ ಸರ್ವೇಶ್ವರನೆಂಬ ನಾನು ತಮ್ಮೊಂದಿಗಿದ್ದೇನೆಂದೂ ಇಸ್ರಯೇಲ್ ವಂಶದವರಾದ ತಾವು ನನ್ನ ಜನರಾಗಿದ್ದೇವೆಂದೂ ನಿಶ್ಚಯಿಸಿಕೊಳ್ಳುವರು; ಇದು ಸರ್ವೇಶ್ವರನಾದ ದೇವರ ನುಡಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವರು ತಮ್ಮ ಯೆಹೋವ ದೇವರೆಂಬ ನಾನೇ ಅವರ ಸಂಗಡ ಇರುವೆನೆಂದೂ ಇಸ್ರಾಯೇಲಿನ ಮನೆತನದವರಾದ ಅವರೇ ನನ್ನ ಜನರಾಗಿರುವರೆಂದೂ ತಿಳಿಯುವರು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.