Ezekiel 34:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ನನ್ನ ಜೀವದಾಣೆ, ನನ್ನ ಕುರಿಗಳು ಎಲ್ಲಾ ಘಗೆಯ ಕಾಡುಪ್ರಾಣಿಗಳಿಂದ ಹಿಡಿಯಲ್ಪಟ್ಟು ಅವುಗಳಿಗೆ ಆಹಾರವಾದವು. ಯಾಕೆಂದರೆ ಅವುಗಳಿಗೆ ಒಳ್ಳೆಯ ಕುರುಬರಿರಲಿಲ್ಲ. ನನ್ನ ಕುರುಬರು ತಮ್ಮ ಕುರಿಗಳಿಗೆ ಗಮನಕೊಡಲಿಲ್ಲ. ಅವರು ಅವುಗಳನ್ನು ಕೊಂದು ತಿಂದರು. ಆದರೆ ಮಂದೆಗೆ ಆಹಾರ ಒದಗಿಸಲಿಲ್ಲ.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕರ್ತನಾದ ಯೆಹೋವನು ಇಂತೆನ್ನುತ್ತಾನೆ “ಅಯ್ಯೋ, ನನ್ನ ಮಂದೆಯು ಕೊಳ್ಳೆಯಾದವು, ಕಾಡಿನ ಸಕಲ ಮೃಗಗಳಿಗೆ ತುತ್ತಾದವು, ಕುರುಬನಿಲ್ಲದೆ ಬಯಲಿನ ಮೃಗಗಳಿಗೆಲ್ಲಾ ಆಹಾರವಾಯಿತು, ನನ್ನ ಕುರುಬರು ನನ್ನ ಕುರಿಗಳನ್ನು ಹುಡುಕಲಿಲ್ಲ, ಅವರು ಸ್ವಂತ ಹೊಟ್ಟೆಯನ್ನು ತುಂಬಿಸಿಕೊಂಡರೇ ಹೊರತು ನನ್ನ ಕುರಿಗಳ ಹೊಟ್ಟೆಯನ್ನು ನೋಡಲೇ ಇಲ್ಲ.”
Kannada BSI Bible 2016
ದೇವ ರಾದ ಕರ್ತನು ಹೀಗೆ ಹೇಳುತ್ತಾನೆ; ನನ್ನ ಜೀವದಾಣೆ, ನಿಶ್ಚಯವಾಗಿ ನನ್ನ ಮಂದೆಯು ಕೊಳ್ಳೆಯಾದದ ರಿಂದಲೂ ನನ್ನ ಮಂದೆಯು ಕುರುಬ ನಿಲ್ಲದೆ ಬಯಲಿನ ಮೃಗಗಳಿಗೆಲ್ಲಾ ಆಹಾರವಾದದ್ದರಿಂದಲೂ ನನ್ನ ಕುರು ಬರು ನನ್ನ ಮಂದೆಯನ್ನು ಹುಡುಕದೆ ಇದ್ದದರಿಂದಲೂ ಕುರುಬರು ತಮ್ಮನ್ನು ಮೇಯಿಸಿಕೊಂಡರೇ ಹೊರತು ತಮ್ಮ ಕುರಿಗಳನ್ನು ಮೇಯಿಸದಿದ್ದದರಿಂದಲೂ
Kannada BSI JV (ಕನ್ನಡ ಸತ್ಯವೇದವು J.V. (BSI))
ಅಯ್ಯೋ, ನನ್ನ ಕುರಿಗಳು ಕೊಳ್ಳೆಯಾದವು, ಕಾಡಿನ ಸಕಲಮೃಗಗಳಿಗೆ ತುತ್ತಾದವು, ಕುರುಬರು ಇರಲಿಲ್ಲವಲ್ಲಾ, ನನ್ನ ಕುರುಬರು ನನ್ನ ಕುರಿಗಳನ್ನು ಹುಡುಕಲಿಲ್ಲವಲ್ಲಾ, ಅವರು ಸ್ವಂತ ಹೊಟ್ಟೆಯನ್ನು ನೋಡಿಕೊಂಡರೇ ಹೊರತು ನನ್ನ ಕುರಿಗಳ ಹೊಟ್ಟೆಯನ್ನು ನೋಡಲೇ ಇಲ್ಲ.
Kannada Bible (KNCL) BSI 2016
ಅಯ್ಯೋ, ನನ್ನ ಕುರಿಗಳು ಕೊಳ್ಳೆಯಾದವು, ಕಾಡಿನ ಸಕಲಮೃಗಗಳಿಗೆ ತುತ್ತಾದವು; ಕುರುಬರೇ ಇರಲಿಲ್ಲ. ನನ್ನ ಕುರುಬರು ನನ್ನ ಕುರಿಗಳನ್ನು ಹುಡುಕಲಿಲ್ಲ; ಅವರು ಸ್ವಂತ ಹೊಟ್ಟೆಪಾಡನ್ನು ನೋಡಿಕೊಂಡರೇ ಹೊರತು, ನನ್ನ ಕುರಿಗಳ ಹೊಟ್ಟೆಯನ್ನು ನೋಡಲೇ ಇಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಜೀವದಾಣೆ, ನಿಶ್ಚಯವಾಗಿ ನನ್ನ ಮಂದೆಯು ಕೊಳ್ಳೆಯಾದುದರಿಂದಲೂ ನನ್ನ ಮಂದೆಯು ಕುರುಬನಿಲ್ಲದೆ ಕಾಡುಮೃಗಗಳಿಗೆಲ್ಲಾ ಆಹಾರವಾದದ್ದರಿಂದಲೂ ನನ್ನ ಕುರುಬರು ನನ್ನ ಮಂದೆಯನ್ನು ಹುಡುಕದೆ ಇದ್ದುದರಿಂದಲೂ ಕುರುಬರು ತಮ್ಮನ್ನು ಮೇಯಿಸಿಕೊಂಡರೇ ಹೊರತು ತಮ್ಮ ಕುರಿಗಳನ್ನು ಮೇಯಿಸದೆ ಇದ್ದುದರಿಂದಲೂ