Ezekiel 36:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಹೌದು, ನಾನು ಅನೇಕಾನೇಕ ಇಸ್ರೇಲ್ ಜನರನ್ನು ನಿನ್ನ ದೇಶಕ್ಕೆ ನಡೆಸುವೆನು. ನೀನು ಅವರ ಸೊತ್ತಾಗುವಿ. ಅವರ ಮಕ್ಕಳನ್ನು ನೀನು ಮತ್ತೆಂದಿಗೂ ತೆಗೆದುಹಾಕುವುದಿಲ್ಲ.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬೆಟ್ಟದ ಸೀಮೆಯೇ, ನಾನು ನಿನ್ನಲ್ಲಿ ಜನ ಸಂಚಾರವನ್ನು ಉಂಟುಮಾಡುವೆನು; ನನ್ನ ಜನರಾದ ಇಸ್ರಾಯೇಲರೇ, ನಿನ್ನಲ್ಲಿ ಸಂಚರಿಸುತ್ತಾ ನಿನ್ನನ್ನು ಸ್ವತ್ತಾಗಿ ಅನುಭವಿಸುವರು; ನೀನು ಇನ್ನು ಅವರಿಗೆ ಪುತ್ರ ಶೋಕವನ್ನು ಕೊಡುವುದಿಲ್ಲ.’”
Kannada BSI Bible 2016
ಹೌದು, ಮನುಷ್ಯರು ನಿಮ್ಮ ಮೇಲೆ ನಡೆಯುವಂತೆ ನಾನು ಮಾಡುವೆನು, ಅದು ನನ್ನ ಜನರಾದ ಇಸ್ರಾಯೇಲ್ಯರ ಮೇಲೆಯೇ; ಅವರು ನಿನ್ನನ್ನು ಸ್ವಾಧೀನಮಾಡಿಕೊಳ್ಳುವರು, ನೀನು ಅವರಿಗೆ ಸ್ವಾಸ್ಥ್ಯವಾಗುವಿ ಮತ್ತು ನೀನು ಇನ್ನು ಮೇಲೆ ಅವರನ್ನು ಮಕ್ಕಳಿಲ್ಲದ ಮನುಷ್ಯರನ್ನಾಗಿ ಮಾಡುವದಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಬೆಟ್ಟದ ಸೀಮೆಯೇ, ನಾನು ನಿನ್ನಲ್ಲಿ ಜನಸಂಚಾರವನ್ನುಂಟುಮಾಡುವೆನು; ನನ್ನ ಜನರಾದ ಇಸ್ರಾಯೇಲ್ಯರೇ ನಿನ್ನಲ್ಲಿ ಸಂಚರಿಸುತ್ತಾ ನಿನ್ನನ್ನು ಸ್ವಾಸ್ತ್ಯವಾಗಿ ಅನುಭವಿಸುವರು; ನೀನು ಇನ್ನು ಅವರಿಗೆ ಪುತ್ರಶೋಕವನ್ನು ಕೊಡದಿರುವಿ.
Kannada Bible (KNCL) BSI 2016
ಬೆಟ್ಟದ ಸೀಮೆಯೇ, ನಾನು ನಿನ್ನಲ್ಲಿ ಜನಸಂಚಾರವನ್ನು ಉಂಟುಮಾಡುವೆನು; ನನ್ನ ಜನರಾದ ಇಸ್ರಯೇಲರೇ, ನಿನ್ನಲ್ಲಿ ಸಂಚರಿಸುತ್ತಾ, ನಿನ್ನನ್ನು ಸೊತ್ತಾಗಿ ಅನುಭವಿಸುವರು; ನೀನು ಇನ್ನು ಅವರಿಗೆ ಪುತ್ರಶೋಕವನ್ನು ಕೊಡದಿರುವೆ.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನನ್ನ ಜನರಾದ ಇಸ್ರಾಯೇಲ್ಯರನ್ನು ನಿಮ್ಮಲ್ಲಿ ವಾಸಿಸುವಂತೆ ಮಾಡುವೆನು. ಅವರು ನಿನ್ನನ್ನು ಸ್ವಾಧೀನಪಡಿಸಿಕೊಳ್ಳುವರು ಮತ್ತು ನೀವು ಅವರ ಸೊತ್ತಾಗಿರುವಿರಿ; ನೀವು ಎಂದಿಗೂ ಅವರ ಮಕ್ಕಳಿಂದ ವಂಚಿತರಾಗುವುದಿಲ್ಲ.