Ezekiel 36:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ಇನ್ನು ಮುಂದೆ ನೀನು ಜನರನ್ನು ನಾಶಮಾಡುವುದಿಲ್ಲ. ಅವರ ಮಕ್ಕಳನ್ನು ನೀನು ತೆಗೆದುಬಿಡುವುದಿಲ್ಲ.” ಇದು ಒಡೆಯನಾದ ಯೆಹೋವನ ನುಡಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಇನ್ನು ಮುಂದೆ ನೀನು ನರಭಕ್ಷಕನಾಗುವುದಿಲ್ಲ, ನಿನ್ನ ಪ್ರಜೆಗೆ ಇನ್ನು ಪುತ್ರಶೋಕವನ್ನು ಕೊಡುವುದಿಲ್ಲ.
Kannada BSI Bible 2016
ಆದದರಿಂದ ಇನ್ನು ಮುಂದೆ ನೀನು ಮನುಷ್ಯರನ್ನು ನುಂಗುವದಿಲ್ಲ; ಇನ್ನು ಮೇಲೆ ನಿನ್ನ ಜನಾಂಗದವರನ್ನು ಮಕ್ಕಳಿಲ್ಲದವ ರನ್ನಾಗಿ ಮಾಡುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇನ್ನು ಮುಂದೆ ನೀನು ನರಭಕ್ಷಕನಾಗುವದಿಲ್ಲ, ನಿನ್ನ ಪ್ರಜೆಗೆ ಇನ್ನು ಪುತ್ರಶೋಕವನ್ನು ಕೊಡದಿರುವಿ;
Kannada Bible (KNCL) BSI 2016
ಇನ್ನು ಮುಂದೆ ನೀನು ನರಭಕ್ಷಕನಾಗುವುದಿಲ್ಲ; ನಿನ್ನ ಪ್ರಜೆಗೆ ಇನ್ನು ಪುತ್ರಶೋಕವನ್ನು ಕೊಡದಿರುವೆ;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದ್ದರಿಂದ ಇನ್ನು ಮೇಲೆ ನೀನು ಮನುಷ್ಯರನ್ನು ನುಂಗುವುದಿಲ್ಲ. ಇನ್ನು ಮೇಲೆ ನಿನ್ನ ಜನಾಂಗದವರನ್ನೂ ಮಕ್ಕಳಿಲ್ಲದವರನ್ನಾಗಿ ಮಾಡುವುದಿಲ್ಲ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.