Ezekiel 36:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಆದ್ದರಿಂದ ಹೋಗಿ ಇಸ್ರೇಲಿನ ಪರ್ವತಗಳಿಗೆ ನನ್ನ ಪರವಾಗಿ ಹೇಳು. ಇದು ಒಡೆಯನಾದ ಯೆಹೋವನ ನುಡಿ ಎಂದು ಹೇಳು. ‘ವೈರಿಗಳು ನಿನ್ನ ಪಟ್ಟಣಗಳನೆಐಲ್ಲಾ ನಾಶಮಾಡಿ ಎಲ್ಲಾ ದಿಕ್ಕುಗಳಿಂದ ನುಗ್ಗಿ ನಿನ್ನ ಮೇಲೆ ಧಾಳಿ ಮಾಡಿರುತ್ತಾರೆ. ನೀನು ಬೇರೆಯವರ ವಶವಾಗಙೇಕೆಂಘದಾಗಿ ಹೀಗೆ ಮಾಡಿದರು. ಜನರು ನಿನ್ನ ವಿಷಯವಾಗಿ ಗುಜುಗುಜು ಮಾತನಾಡಿದರು.’“
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈ ಪ್ರವಾದನೆಯನ್ನು ನುಡಿಯಬೇಕೆಂದು ಕರ್ತನಾದ ಯೆಹೋವನ ಅಪ್ಪಣೆಯಾಯಿತು, “‘ಅಯ್ಯೋ, ಎಲ್ಲಾ ಕಡೆಯೂ ತುಳಿಯಲ್ಪಟ್ಟು ಹಾಳಾದ ನೀವು ಜನಾಂಗಗಳಲ್ಲಿ ಉಳಿದವರ ವಶವಾಗಿದ್ದು, ಹರಟೆಗಾರರ ಬಾಯಿಗೆ ಬಿದ್ದು, ಜನರ ದೂಷಣೆಗೆ ಗುರಿಯಾಗಿದ್ದೀರಿ.
Kannada BSI Bible 2016
ಆದದ ರಿಂದ ಪ್ರವಾದಿಸು ಮತ್ತು ಹೇಳು, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಅವರು ನಿನ್ನನ್ನು ಹಾಳುಮಾಡಿ; ಎಲ್ಲಾ ಕಡೆಗಳಿಂದಲೂ ನುಂಗಿಬಿಟ್ಟರು. ಅದು ನೀವು ಅನ್ಯಜನಾಂಗಗಳ ಉಳಿಯುವಿಕೆಗೆ ಸ್ವಾಸ್ತ್ಯವಾಗ ಬೇಕೆಂದು ನೀವು ಮಾತನಾಡುವವರ ತುಟಿಗಳಲ್ಲಿಯೂ ಜನರ ನಿಂದೆಯಲ್ಲಿಯೂ ಮೇಲೆತ್ತಲ್ಪಟ್ಟಿದ್ದೀರಿ;
Kannada BSI JV (ಕನ್ನಡ ಸತ್ಯವೇದವು J.V. (BSI))
ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಅಯ್ಯೋ, ಎಲ್ಲಾ ಕಡೆಯೂ ತುಳಿಯಲ್ಪಟ್ಟು ಹಾಳಾದ ನೀವು ಜನಾಂಗಗಳಲ್ಲಿ ಉಳಿದವರ ವಶವಾಗಿದ್ದೀರಲ್ಲಾ! ಹರಟೆಗಾರರ ಬಾಯಿಗೆ ಬಿದ್ದು ಜನರ ದೂಷಣೆಗೆ ಗುರಿಯಾಗಿದ್ದೀರಲ್ಲಾ!
Kannada Bible (KNCL) BSI 2016
ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಅಯ್ಯೋ, ಎಲ್ಲಾ ಕಡೆಯೂ ತುಳಿಯಲ್ಪಟ್ಟು, ಹಾಳಾದ ನೀವು, ಜನಾಂಗಗಳಲ್ಲಿ ಉಳಿದವರ ವಶವಾಗಿದ್ದು ಹರಟೆಕೊಚ್ಚುವವರ ಬಾಯಿಗೆ ಬಿದ್ದು, ಜನರ ದೂಷಣೆಗೆ ಗುರಿಯಾಗಿದ್ದೀರಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದ್ದರಿಂದ ನೀನು ಪ್ರವಾದಿಸಿ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಅವರು ನಿನ್ನನ್ನು ಹಾಳು ಮಾಡಿ ಎಲ್ಲಾ ಕಡೆಗಳಿಂದಲೂ ನಿನ್ನನ್ನು ತುಳಿದುಬಿಟ್ಟರು. ನೀವು ಇತರ ಜನಾಂಗಗಳಲ್ಲಿ ಉಳಿದವರ ವಶವಾಗಿದ್ದು ಹರಟೆಗಾರರ ಬಾಯಿಗೆ ಬಿದ್ದು ಜನರ ನಿಂದೆಗೆ ಗುರಿಯಾಗಿದ್ದೀರಿ.