Ezekiel 36:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಎದೋಮಿನ ಬಗ್ಗೆಯೂ ಉಳಿದ ಆ ವಿದೇಶಗಳ ಬಗ್ಗೆಯೂ ನಾನು ರೋಷದಿಂದ ಮಾತಾಡುತ್ತಿದ್ದೇನೆಂದು ಪ್ರಮಾಣ ಮಾಡುತ್ತೇನೆ. ಆ ಜನಾಂಗಗಳು ನನ್ನ ದೇಶವನ್ನು ತಮ್ಮ ಸಾಬಸ್ತ್ಯವನ್ನಾಗಿ ಸಂತೋಷದಿಂದ ತೆಗೆದುಕೊಂಡರು. ಅವರು ಅದನ್ನು ವಶಪಡಿಸಿಕೊಂಡು ಸೂರೆ ಮಾಡಿದಾಗ ಮತ್ತು ನನ್ನ ಜನರಿಗೆ ಅವಮಾನ ಮಾಡಿದಾಗ ನನ್ನ ಜನರನ್ನು ಅವರು ಎಷ್ಟೊಂದು ದೆಬಷೀಸುತ್ತಾರೆಂದು ತೋರಿಸುತ್ತಾ ಉಲ್ಲಾಸಪಟ್ಟರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದೇವರಾದ ಯೆಹೋವನಾದ ಕರ್ತನು ಹೀಗೆ ನುಡಿಯುತ್ತಾನೆ, ಆಹಾ, ನನ್ನ ದೇಶವನ್ನು ತಮ್ಮ ಸ್ವಾಸ್ತ್ಯಮಾಡಿಕೊಂಡು ಪೂರ್ಣಹೃದಯದಿಂದ ಆನಂದಪಟ್ಟವರೂ, ಅದನ್ನು ಮನಃಪೂರ್ವಕವಾಗಿ ತಿರಸ್ಕರಿಸಿ ಸೂರೆಗೆ ತಳ್ಳಿಬಿಟ್ಟವರೂ ಆದ ಎದೋಮಿನವರೆಲ್ಲರನ್ನೂ, ಇತರ ಜನಾಂಗಗಳಲ್ಲಿ ಉಳಿದವರನ್ನೂ ನಾನು ರೋಷದ ಬೆಂಕಿಯಿಂದ ಉರಿಯುತ್ತಾ ಶಪಿಸಿದ್ದೇನೆ.’
Kannada BSI Bible 2016
ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಿಶ್ಚಯವಾಗಿ ನನ್ನ ರೋಷದ ಬೆಂಕಿ ಯಿಂದ ಅನ್ಯಜನಾಂಗಗಳಲ್ಲಿ ಉಳಿದವರಿಗೂ ಎಲ್ಲಾ ಎದೋಮಿಗೆ ವಿರುದ್ಧವಾಗಿ ನಾನು ಮಾತನಾಡಿದ್ದೇನೆ; ಅವರ ಸಂಪೂರ್ಣ ಹೃದಯದ ಸಂತೋಷದಿಂದಲೂ ತಮ್ಮ ಹಗೆಯ ಮನೋಭಾವದಿಂದಲೂ ನನ್ನ ದೇಶ ವನ್ನು ಕೊಳ್ಳೆಯಾಗಿ ಹೊರಗೆ ಹಾಕುವ ಹಾಗೆ ತಮಗೆ ಸ್ವಾಸ್ತ್ಯವಾಗಿ ಕೊಟ್ಟಿದ್ದಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಹಾ, ನನ್ನ ದೇಶವನ್ನು ತಮ್ಮ ಸ್ವಾಸ್ತ್ಯಮಾಡಿಕೊಂಡು ಪೂರ್ಣಹೃದಯದಿಂದ ಆನಂದಪಟ್ಟವರೂ ಅದನ್ನು ಮನಃಪೂರ್ವಕವಾಗಿ ತಿರಸ್ಕರಿಸಿ ಸೂರೆಗೆ ತಳ್ಳಿಬಿಟ್ಟವರೂ ಆದ ಎದೋವಿುನವರೆಲ್ಲರನ್ನೂ ಇತರ ಜನಾಂಗಗಳಲ್ಲಿ ಉಳಿದವರನ್ನೂ ನಾನು ರೋಷದಿಂದುರಿಯುತ್ತಾ ಶಪಿಸೇ ಶಪಿಸಿದ್ದೇನೆ;
Kannada Bible (KNCL) BSI 2016
“ಆಹಾ, ನನ್ನ ದೇಶವನ್ನು ತಮ್ಮ ಸೊತ್ತಾಗಿ ಮಾಡಿಕೊಂಡು, ಪೂರ್ಣಹೃದಯದಿಂದ ಆನಂದಪಟ್ಟವರು ಹಾಗು ಅದನ್ನು ಮನಃಪೂರ್ವಕವಾಗಿ ತಿರಸ್ಕರಿಸಿ ಸೂರೆಗೆ ತಳ್ಳಿಬಿಟ್ಟವರು ಆದ ಎದೋಮಿನವರೆಲ್ಲರನ್ನು ಮತ್ತು ಇತರ ಜನಾಂಗಗಳಲ್ಲಿ ಉಳಿದವರನ್ನು ನಾನು ರೋಷಾವೇಶದಿಂದ ಶಪಿಸಿಯೇ ಶಪಿಸಿದ್ದೇನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಿಶ್ಚಯವಾಗಿ ನನ್ನ ರೋಷದ ಬೆಂಕಿಯಿಂದ ಇತರ ಜನಾಂಗಗಳಲ್ಲಿ ಉಳಿದವರಿಗೂ ಎದೋಮಿನವರೆಲ್ಲರಿಗೂ ವಿರುದ್ಧವಾಗಿ ನಾನು ಮಾತನಾಡಿದ್ದೇನೆ; ಅವರ ಸಂಪೂರ್ಣ ಹೃದಯದ ಸಂತೋಷದಿಂದಲೂ ತಮ್ಮ ಹಗೆಯ ಮನೋಭಾವದಿಂದಲೂ ನನ್ನ ದೇಶವನ್ನು ತಮ್ಮ ಸೊತ್ತಾಗಿ ಮಾಡಿಕೊಂಡಿದ್ದಾರೆ. ಅವರು ಅದರ ಹುಲ್ಲುಗಾವಲನ್ನು ಸಹ ಸೂರೆಮಾಡಬೇಕೆಂದಿದ್ದಾರೆ.’