Ezekiel 36:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಇಸ್ರೇಲ್ ದೇಶದ ವಿಷಯವಾಗಿ ಅವರಿಗೆ ಹೇಳು. ಪರ್ವತ, ಬೆಟ್ಟ, ತಗ್ಗು, ಹೊಳೆಗಳಿಗೆ ಹೇಳು. ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ ಎಂದು ತಿಳಿಸು. ‘ನೀನು ಆ ದೇಶಗಳವರ ನಿಂದನೆಯ ಮಾತುಗಳನ್ನು ಕೇಳಙೇಕಾಯಿತಲ್ಲಾ ಎಂದು ನನ್ನ ಹೃದಯವು ಸಿಟ್ಟಿನಲ್ಲಿ ಕುದಿಯುತ್ತದೆ.’“
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೀಗಿರಲು ಇಸ್ರಾಯೇಲ್ ದೇಶದ ವಿಷಯವಾದ ಈ ಪ್ರವಾದನೆಯನ್ನು ಅದರ ಬೆಟ್ಟಗಳಿಗೆ, ಗುಡ್ಡಗಳಿಗೆ, ತೊರೆತಗ್ಗುಗಳಿಗೆ ನುಡಿಯಬೇಕೆಂದು ಅಪ್ಪಣೆಯಾಗಿದೆ. ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಆಹಾ! ನಾನು ಕೋಪೋದ್ರೇಕದಿಂದಲೂ, ರೋಷಾವೇಶದಿಂದಲೂ ಮಾತನಾಡಿದ್ದೇನೆ, ನೀವು ಅನ್ಯಜನಾಂಗಗಳಿಂದ ಅವಮಾನವನ್ನು ಅನುಭವಿಸಿದ್ದೀರಿ!’
Kannada BSI Bible 2016
ಆದದರಿಂದ ಇಸ್ರಾಯೇಲ್‌ ದೇಶಕ್ಕೆ ಸಂಬಂಧಪಟ್ಟ ಹಾಗೆ ಪ್ರವಾದಿಸು; ಪರ್ವತ ಗಳಿಗೂ ಬೆಟ್ಟಗಳಿಗೂ ಹಳ್ಳಕೊಳ್ಳಗಳಿಗೂ ಹೇಳಬೇಕಾ ದದ್ದೇನಂದರೆ, ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಇಗೋ, ಅನ್ಯಜನಾಂಗಗಳ ಅವಮಾನವನ್ನು ನೀನು ಹೊತ್ತದ್ದರಿಂದ ನಾನು ರೋಷದಿಂದಲೂ ರೌದ್ರ ದಿಂದಲೂ ಮಾತನಾಡಿದ್ದೇನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೀಗಿರಲು ಇಸ್ರಾಯೇಲ್ ದೇಶದ ವಿಷಯವಾದ ಈ ದೈವೋಕ್ತಿಯನ್ನು ಅದರ ಬೆಟ್ಟಗುಡ್ಡ ತೊರೆತಗ್ಗುಗಳಿಗೆ ನುಡಿಯಬೇಕೆಂದು ಅಪ್ಪಣೆಯಾಗಿದೆ - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಆಹಾ, ನಾನು ಕೋಪೋದ್ರೇಕದಿಂದಲೂ ರೋಷಾವೇಶದಿಂದಲೂ ಮಾತಾಡಿದ್ದೇನೆ, ನೀವು ಅನ್ಯಜನಾಂಗಗಳಿಂದ ಅವಮಾನವನ್ನು ಅನುಭವಿಸಿದ್ದೀರಲ್ಲಾ!
Kannada Bible (KNCL) BSI 2016
“ಹೀಗಿರಲು ಇಸ್ರಯೇಲ್ ನಾಡಿನ ವಿಷಯವಾದ ಈ ದೈವೋಕ್ತಿಯನ್ನು ಅದರ ಬೆಟ್ಟಗುಡ್ಡ, ತೊರೆ-ತಗ್ಗುಗಳಿಗೆ ನುಡಿಯಬೇಕೆಂದು ಅಪ್ಪಣೆಯಾಗಿದೆ - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಆಹಾ, ನಾನು ಕೋಪೋದ್ರೇಕದಿಂದ ರೋಷಾವೇಷದಿಂದ ಮಾತನಾಡಿದ್ದೇನೆ. ನೀವು ಅನ್ಯಜನಾಂಗಗಳಿಂದ ಅವಮಾನವನ್ನು ಅನುಭವಿಸಿದ್ದೀರಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದ್ದರಿಂದ ಇಸ್ರಾಯೇಲ್ ದೇಶಕ್ಕೆ ಸಂಬಂಧಪಟ್ಟ ಹಾಗೆ ಪ್ರವಾದಿಸು. ಪರ್ವತಗಳಿಗೂ ಬೆಟ್ಟಗಳಿಗೂ ಹಳ್ಳಕೊಳ್ಳಗಳಿಗೂ ಹೇಳಬೇಕಾದದ್ದೇನೆಂದರೆ: ‘ಸಾರ್ವಭೌಮ ಯೆಹೋವ ದೇವರು ಇಂತೆನ್ನುತ್ತಾರೆ: ಇತರ ಜನಾಂಗಗಳ ಅವಮಾನವನ್ನು ಹೊತ್ತದ್ದರಿಂದ ನಾನು ರೋಷದಿಂದಲೂ ರೌದ್ರದಿಂದಲೂ ಮಾತನಾಡಿದ್ದೇನೆ.