Ezekiel 38:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾನು ನಿನ್ನ ದವಡೆಗೆ ಕೊಕ್ಕೆ ಹಾಕಿ ನಿನ್ನನ್ನು ಸೆರೆಹಿಡಿದುಕೊಂಡು ಬರುವೆನು. ನಿನೆಐಲ್ಲಾ ಭೂಸೈನಿಕರನ್ನೂ ನಿನೆಐಲ್ಲಾ ಕುದುರೆಗಳನ್ನೂ ನಿನೆಐಲ್ಲಾ ರಾಹುತರನ್ನೂ ಬಂಧಿಸಿ ತರುವೆನು. ನಿನ್ನ ಸೈನಿಕರು ಸಮವಸ್ತ್ರಧಾರಿಗಳಾಗಿ ಖೇಡ್ಯಶಿರಸ್ತ್ರಾಣಗಳನ್ನು ತೊಟ್ಟುಕೊಂಡಿರುವಾಗಲೇ ಅವರನ್ನು ಬಂಧಿಸಿ ತರುವೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ನಿನ್ನನ್ನು ಹಿಂದಕ್ಕೆ ತಿರುಗಿಸಿ, ನಿನ್ನ ದವಡೆಗಳಲ್ಲಿ ಕೊಕ್ಕೆಗಳನ್ನು ಹಾಕಿ, ನಿನ್ನ ಎಲ್ಲಾ ಸೈನ್ಯವನ್ನೂ, ಕುದರೆಗಳನ್ನೂ ಮತ್ತು ಕುದರೆ ಸವಾರರನ್ನೂ ಮುಂದೆ ತರುವೆನು. ಇವರೆಲ್ಲರೂ ನಾನಾ ತರವಾದ ಆಯುಧಗಳನ್ನು ತೊಟ್ಟಿರುವರು, ಇವರೊಂದಿಗೆ ಖೇಡ್ಯ ಮತ್ತು ಗುರಾಣಿಗಳುಳ್ಳ ಮಹಾಸಮೂಹವನ್ನು ತರುವೆನು. ಇವರೆಲ್ಲರೂ ಖಡ್ಗವನ್ನು ಹಿಡಿದಿರುವರು.
Kannada BSI Bible 2016
ನಾನು ನಿನ್ನನ್ನು ಹಿಂದಕ್ಕೆ ತಿರುಗಿಸಿ ನಿನ್ನ ದವಡೆಗಳಲ್ಲಿ ಕೊಕ್ಕೆಗಳನ್ನು ಹಾಕು ವೆನು; ನಾನು ನಿನ್ನನ್ನೂ ನಿನ್ನ ಎಲ್ಲಾ ಸೈನ್ಯವನ್ನೂ ಕುದುರೆಗಳನ್ನೂ ಕುದುರೆ ಸವಾರರನ್ನೂ ಮುಂದೆ ತರುವೆನು. ಇವರೆಲ್ಲರೂ ನಾನಾ ತರವಾದ ಆಯುಧ ಗಳನ್ನು ತೊಟ್ಟಿರುವರು, ಇವರೊಂದಿಗೆ ಖೇಡ್ಯವೂ ಮತ್ತು ಗುರಾಣಿಯೂ ಉಳ್ಳ ಮಹಾಸಮೂಹವನ್ನು ತರುವೆನು; ಇವರೆಲ್ಲರೂ ಕತ್ತಿಗಳನ್ನು ಹಿಡಿದಿರುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಹಾ, ನಾನು ನಿನಗೆ ವಿರುದ್ಧನಾಗಿ ನಿನ್ನನ್ನು ತಿರುಗಿಸಿ ನಿನ್ನ ದವಡೆಗೆ ಕೊಕ್ಕೆಹಾಕಿ ಈಚೆಗೆ ಎಳೆದು ಅಶ್ವಾರೂಢರೂ ಖೇಡ್ಯಪಾಣಿಗಳೂ ಯಾರೂ ತಪ್ಪದೆ ವಿಚಿತ್ರಾಂಬರರೂ ಖಡ್ಗಹಸ್ತರೂ ಆದ ರಾಹುತರ ದೊಡ್ಡ ತಂಡದಿಂದ ಕೂಡಿದ ನಿನ್ನ ಸೈನ್ಯವೆಲ್ಲವನ್ನು
Kannada Bible (KNCL) BSI 2016
ಇಗೋ, ನಾನು ನಿನಗೆ ವಿರುದ್ಧವಾಗಿ ನಿನ್ನನ್ನು ತಿರುಗಿಸಿ, ನಿನ್ನ ದವಡೆಗೆ ಕೊಕ್ಕೆಹಾಕಿ ಈಚೆಗೆ ಎಳೆಯುವೆನು. ಅಶ್ವಾರೂಢರು, ಖೇಡ್ಯಪ್ರಾಣಿಗಳು, ಎಲ್ಲ ವಿಚಿತ್ರಾಂಬರು ಹಾಗು ಖಡ್ಗಹಸ್ತರು ಆದ ರಾಹುತರ ದೊಡ್ಡ ತಂಡದಿಂದ ಕೂಡಿದ ನಿನ್ನ ಸೈನ್ಯವೆಲ್ಲವನ್ನು,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ನಿನ್ನನ್ನು ಹಿಂದಕ್ಕೆ ತಿರುಗಿಸಿ ನಿನ್ನ ದವಡೆಗಳಲ್ಲಿ ಕೊಕ್ಕೆಗಳನ್ನು ಹಾಕುವೆನು. ನಾನು ನಿನ್ನನ್ನೂ ನಿನ್ನ ಎಲ್ಲಾ ಸೈನ್ಯವನ್ನೂ ಕುದುರೆಗಳನ್ನೂ ಮತ್ತು ಕುದುರೆ ಸವಾರರನ್ನೂ ಮುಂದೆ ತರುವೆನು. ಇವರೆಲ್ಲರೂ ನಾನಾ ತರವಾದ ಆಯುಧಗಳನ್ನು ತೊಟ್ಟಿರುವರು, ಇವರೊಂದಿಗೆ ಚಿಕ್ಕ ಮತ್ತು ದೊಡ್ಡ ಗುರಾಣಿಗಳುಳ್ಳ ಮಹಾಸಮೂಹವನ್ನು ತರುವೆನು. ಇವರೆಲ್ಲರೂ ಖಡ್ಗಗಳನ್ನು ಹಿಡಿದಿರುವರು.