Ezekiel 39:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನೀನು ಇಸ್ರೇಲಿನ ಪರ್ವತದಲ್ಲಿ ಸಾಯುವೆ, ನೀನೂ, ನಿನ್ನ ಎಲ್ಲಾ ಸೈನ್ಯ, ನಿನ್ನೊಂದಿಗೆ ಘಂದಿದ್ದ ಇತರ ದೇಶದವರೆಲ್ಲಾ ರಣರಂಗದಲ್ಲಿ ಸಾಯುವರು. ನಿಮ್ಮ ಹೆಣಗಳನ್ನು ಆಕಾಶದ ಸಕಲ ಮಾಂಸಹಾರಿ ಪಕ್ಷಿಗಳಿಗೂ, ಕಾಡುಪ್ರಾಣಿಗಳಿಗೂ ಆಹಾರವಾಗಿ ಕೊಡುವೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನೂ, ನಿನ್ನ ಎಲ್ಲಾ ಸೈನ್ಯದಳಗಳೂ ಮತ್ತು ನಿನ್ನೊಂದಿಗಿರುವ ನಿನ್ನ ಜನರೂ ಇಸ್ರಾಯೇಲಿನ ಪರ್ವತಗಳಲ್ಲಿ ಬೀಳುವಿರಿ; ನಾನು ನಿಮ್ಮನ್ನು ಹದ್ದುಗಳಿಗೂ, ಪಕ್ಷಿಗಳಿಗೂ ಕಾಡಿನ ಮೃಗಗಳಿಗೂ, ಬಯಲಿನ ಭೂಜಂತುಗಳಿಗೂ ಆಹಾರವಾಗುವಂತೆ ನಾನು ನಿನ್ನನ್ನು ಕೊಡುವೆನು.
Kannada BSI Bible 2016
ನೀನೂ ನಿನ್ನ ಎಲ್ಲಾ ದಳಗಳೂ ನಿನ್ನೊಂದಿಗಿರುವ ನಿನ್ನ ಜನರೂ ಇಸ್ರಾಯೇಲಿನ ಪರ್ವತಗಳ ಮೇಲೆ ಬೀಳುವಿರಿ; ಎಲ್ಲಾ ತರಹದ ಮಾಂಸ ತಿನ್ನುವ ಪಕ್ಷಿಗಳಿಗೂ ಬಯಲಿನ ಮೃಗಗಳಿಗೂ ತಿನ್ನುವಂತೆ ನಾನು ನಿನ್ನನ್ನು ಕೊಡುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನೂ ನಿನ್ನ ಎಲ್ಲಾ ಗುವ್ಮಿುಗಳೂ ನಿನ್ನೊಂದಿಗಿರುವ ಜನಾಂಗಗಳೂ ಇಸ್ರಾಯೇಲಿನ ಪರ್ವತಗಳಲ್ಲಿ ಬಿದ್ದುಬಿಡುವಿರಿ; ನಾನು ನಿಮ್ಮನ್ನು ಮಾಂಸತಿನ್ನುವ ಬಗೆಬಗೆಯ ಹಕ್ಕಿಗಳಿಗೂ ಭೂಜಂತುಗಳಿಗೂ ಆಹಾರ ಮಾಡುವೆನು;
Kannada Bible (KNCL) BSI 2016
ನೀನು, ನಿನ್ನ ಸೇನೆ ಹಾಗು ಪರಿವಾರ ಇಸ್ರಯೇಲಿನ ಪರ್ವತಗಳಲ್ಲಿ ಬಿದ್ದುಬಿಡುವಿರಿ; ನಾನು ನಿಮ್ಮನ್ನು ಮಾಂಸಾಹಾರಿಗಳಾದ ಬಗೆಬಗೆಯ ಹಕ್ಕಿಗಳಿಗೂ ಭೂಜಂತುಗಳಿಗೂ ಆಹಾರ ಮಾಡುವೆನು. ನೀವು ಬಯಲಿನಲ್ಲೇ ಬೀಳುವಿರಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀನೂ ನಿನ್ನ ಎಲ್ಲಾ ದಳಗಳೂ ಮತ್ತು ನಿನ್ನೊಂದಿಗಿರುವ ನಿನ್ನ ಜನರೂ ಇಸ್ರಾಯೇಲಿನ ಪರ್ವತಗಳ ಮೇಲೆ ಬೀಳುವಿರಿ. ಮಾಂಸತಿನ್ನುವ ಎಲ್ಲ ತರಹದ ಪಕ್ಷಿಗಳಿಗೂ ಮತ್ತು ಕಾಡುಮೃಗಗಳಿಗೂ ಆಹಾರವಾಗುವಂತೆ ನಾನು ನಿನ್ನನ್ನು ಕೊಡುವೆನು.