Ezekiel 40:10 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದ್ವಾರದ ಎರಡು ಘದಿಗಳಲ್ಲಿಯೂ ಮೂರು ಸಣ್ಣ ಕೋಣೆಗಳಿದ್ದವು. ಈ ಕೋಣೆಗಳೆಲ್ಲವೂ ಒಂದೇ ಅಳತೆಯುಳ್ಳವುಗಳಾಗಿದ್ದವು. ಅವುಗಳ ಗೋಡೆಗಳೂ ಸಮಾನ ಅಳತೆಯುಳ್ಳವುಗಳಾಗಿದ್ದವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಪೂರ್ವದಿಕ್ಕಿನ ಹೆಬ್ಬಾಗಿಲಿನ ಎರಡು ಪಕ್ಕಗಳಲ್ಲಿ ಮೂರು ಗೋಡೆಕೋಣೆಗಳಿದ್ದವು. ಆ ಮೂರಕ್ಕೂ ಒಂದೇ ಅಳತೆ ಇತ್ತು. ಎರಡು ಪಕ್ಕಗಳಲ್ಲಿನ ಕಂಬಗಳೂ ಒಂದೇ ಅಳತೆಯಾಗಿದ್ದವು.
Kannada BSI Bible 2016
ಮೂಡ ಣದ ಕಡೆಗಿರುವ ಬಾಗಲಿನ ಕೊಠಡಿಗಳು ಈ ಕಡೆ ಯಲ್ಲಿ ಮೂರು ಆ ಕಡೆಯಲ್ಲಿ ಮೂರು ಇದ್ದವು; ಆ ಮೂರಕ್ಕೂ ಒಂದೇ ಅಳತೆ ಇತ್ತು. ಈ ಕಡೆಯೂ ಆ ಕಡೆಯೂ ಕಂಬಗಳಿಗೂ ಸಹ ಒಂದೇ ಅಳತೆ ಇತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮೂಡಣ ಹೆಬ್ಬಾಗಿಲಿನ ಎರಡು ಪಕ್ಕಗಳಲ್ಲಿ ಮೂರು ಮೂರು ಗೋಡೇಕೋಣೆಗಳಿದ್ದವು; ಅವೆಲ್ಲಾ ಒಂದೇ ಅಳತೆ; ಎರಡು ಪಕ್ಕಗಳಲ್ಲಿನ ನಿಲವುಕಂಬಗಳೂ ಒಂದೇ ಅಳತೆಯಾಗಿದ್ದವು.
Kannada Bible (KNCL) BSI 2016
ಪೂರ್ವದಿಕ್ಕಿನ ಹೆಬ್ಬಾಗಿಲಿನ ಎರಡು ಪಕ್ಕಗಳಲ್ಲಿ ಮೂರು ಮೂರು ಗೋಡೇಕೋಣೆಗಳಿದ್ದವು; ಅವೆಲ್ಲಾ ಒಂದೇ ಅಳತೆ; ಎರಡು ಪಕ್ಕಗಳಲ್ಲಿನ ನಿಲವು ಕಂಬಗಳೂ ಒಂದೇ ಅಳತೆಯಾಗಿದ್ದವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪೂರ್ವದಿಕ್ಕಿನ ಕೋಣೆಯ ಉಪವಿಭಾಗಗಳು ಈ ಕಡೆಯಲ್ಲಿ ಮೂರೂ ಆ ಕಡೆಯಲ್ಲಿ ಮೂರೂ ಇದ್ದವು. ಆ ಮೂರಕ್ಕೂ ಒಂದೇ ಅಳತೆ ಇತ್ತು. ಎರಡೂ ಕಡೆಯ ಕಂಬಗಳಿಗೂ ಸಹ ಒಂದೇ ಅಳತೆ ಇತ್ತು.