Ezekiel 40:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವನು ಕೈಸಾಲೆಯ ಎರಡು ಘದಿಗಳ ಗೋಡೆಯನ್ನು ಅಳತೆ ಮಾಡಿದಾಗ ಅದರ ಒಟ್ಟು ಅಳತೆ ಅರವತ್ತು ಮೊಳದಷ್ಟಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಂಗಳದಲ್ಲಿನ ಕಂಬಗಳನ್ನು ಅಳತೆ ಮಾಡಲು ಅರವತ್ತು ಮೊಳವಿದ್ದವು; ಅದನ್ನು ಹೆಬ್ಬಾಗಿಲಿನ ಸುತ್ತುಮುತ್ತಲಿರುವ ಕಂಬದವರೆಗೂ ಅಳೆದನು.
Kannada BSI Bible 2016
ಕಂಬಗಳನ್ನು ಸಹ ಅರವತ್ತು ಮೊಳಗಳ ಹಾಗೆ ಮಾಡಿದನು; ಅದು ಬಾಗಲಿನ ಸುತ್ತಮುತ್ತಲಿರುವ (ಅಂಗಳದ) ಕಂಬದ ವರೆಗೂ ಇತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಪ್ರಾಕಾರದಲ್ಲಿನ ನಿಲವುಕಂಬದವರೆಗೆ ನಿಲವುಕಂಬಗಳನ್ನು [ಅಳತೆ] ಮಾಡಲು ಅರುವತ್ತು ಮೊಳವಿದ್ದವು; ಹೆಬ್ಬಾಗಿಲನ್ನು ಸುತ್ತುಮುತ್ತಲು [ಅಳೆದನು].
Kannada Bible (KNCL) BSI 2016
ಪ್ರಾಕಾರದಲ್ಲಿನ ನಿಲವು ಕಂಬದವರೆಗೆ ನಿಲವುಕಂಬಗಳನ್ನು ಅಳತೆಮಾಡಲು ಮೂವತ್ತು ಮೀಟರ್ ಇದ್ದವು. ಹೆಬ್ಬಾಗಿಲನ್ನು ಸುತ್ತುಮುತ್ತಲು ಅಳೆದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬಾಗಿಲಿನ ಚೌಕಟ್ಟಿನ ಕಂಬಗಳನ್ನು ಅಳತೆಮಾಡಲು ಸುಮಾರು ಮೂವತ್ತೆರಡು ಮೀಟರ್ ಇದ್ದವು. ಅದು ಬಾಗಿಲಿನ ಸುತ್ತಮುತ್ತಲಿರುವ ಕಂಬದವರೆಗೂ ಇತ್ತು.