Ezekiel 40:18 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದ್ವಾರದ ಉದ್ದ ಅಳತೆಯಷ್ಟು ನೆಲಗಟ್ಟಿನ ಅಗಲದ ಅಳತೆಯಾಗಿತ್ತು. ನೆಲಗಟ್ಟು ಪ್ರವೇಶ ದ್ವಾರದ ಒಳಗಿನ ತುದಿಯ ತನಕವಿತ್ತು. ಇದು ಕೆಳಗಣ ನೆಲಗಟ್ಟಾಗಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಕೆಳಗಣ ಕಲ್ಲುಹಾಸಿದ ನೆಲವೂ ಹೆಬ್ಬಾಗಿಲುಗಳ ಎರಡು ಪಕ್ಕಗಳವರೆಗೂ ಹಾಸಲ್ಪಟಿತ್ತು. ಅದರ ಅಗಲವೂ ಬಾಗಿಲುಗಳ ಉದ್ದಕ್ಕೆ ಸಮನಾಗಿತ್ತು. ಇದು ಕೆಳಗಿನ ಕಲ್ಲುಹಾಸಿದ ನೆಲವಾಗಿತ್ತು.
Kannada BSI Bible 2016
ಬಾಗಲುಗಳ ಪಾರ್ಶ್ವದಲ್ಲಿ ಬಾಗಲುಗಳ ಉದ್ದಕ್ಕೆ ಸರಿಯಾಗಿ ಇದ್ದ ಆ ಕಲ್ಲು ಹಾಸಿದನೆಲವು ಕೆಳಗಿನ ನೆಲಗಟ್ಟಾಗಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಕೆಳಗಣ ನೆಲಗಟ್ಟು ಹೆಬ್ಬಾಗಿಲುಗಳ ಎರಡು ಪಕ್ಕಗಳಲ್ಲಿಯೂ ಹಾಸಲ್ಪಟ್ಟು ಅವುಗಳಷ್ಟು ಅಗಲವಾಗಿತ್ತು.
Kannada Bible (KNCL) BSI 2016
ಆ ಕೆಳಗಣ ನೆಲೆಗಟ್ಟು ಹೆಬ್ಬಾಗಿಲುಗಳ ಎರಡು ಪಕ್ಕಗಳಲ್ಲೂ ಹಾಸಲಾಗಿದ್ದ ಅವುಗಳಷ್ಟು ಅಗಲವಾಗಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬಾಗಿಲುಗಳ ಪಾರ್ಷ್ವದಲ್ಲಿಯೂ ಬಾಗಿಲುಗಳ ಉದ್ದಕ್ಕೆ ಸರಿಯಾಗಿಯೂ ಇದ್ದ ಆ ಕಲ್ಲು ಹಾಸಿದ ನೆಲವು ಕೆಳಗಿನ ನೆಲಗಟ್ಟಾಗಿತ್ತು.