Ezekiel 40:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವನು ಕೆಳಗಣ ಪ್ರವೇಶ ದ್ವಾರದ ಒಳಭಾಗದಿಂದ ಹಿಡಿದು ಒಳಗಿನ ಪ್ರಾಕಾರದ ಹೊರಭಾಗದ ತನಕ ಅಳತೆ ಮಾಡಿದಾಗ ಅದು ನೂರು ಮೊಳ ಉದ್ದ ಪೂರ್ವದಿಕ್ಕಿನಲ್ಲಿಯೂ, ಉತ್ತರದಿಕ್ಕಿನಲ್ಲಿಯೂ ಇತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ಪೂರ್ವಕ್ಕೂ, ಉತ್ತರಕ್ಕೂ ಕೆಳಗಣ ಹೆಬ್ಬಾಗಿಲಿನ ಒಳಗಡೆಯಿಂದ ಒಳಗಣ ಅಂಗಳದ ಹೊರಗಡೆಯ ತನಕ ಅಳೆಯಲು, ಅದು ನೂರು ಮೊಳವಿತ್ತು.
Kannada BSI Bible 2016
ಆಗ ಅವನು ಕೆಳಗಿನ ಬಾಗಲಿನ ಮುಂದುಗಡೆಯಿಂದ ಒಳಗಿನ ಅಂಗಳದ ಹೊರಗಡೆಯ ವರೆಗೂ ಪೂರ್ವಕ್ಕೂ ಉತ್ತರಕ್ಕೂ ಇರುವ ಅಗಲವನ್ನು ನೂರು ಮೊಳವೆಂದು ಅಳೆದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ಮೂಡಲಲ್ಲಿಯೂ ಬಡಗಲಲ್ಲಿಯೂ ಕೆಳಗಣ ಹೆಬ್ಬಾಗಿಲಿನ ಒಳಗಡೆಯಿಂದ ಒಳಗಣ ಪ್ರಾಕಾರದ ಹೊರಗಡೆಯ ತನಕ ಅಳೆಯಲು ನೂರು ಮೊಳವಿತ್ತು.
Kannada Bible (KNCL) BSI 2016
ಅವನು ಪೂರ್ವದಲ್ಲೂ ಉತ್ತರದಲ್ಲೂ ಕೆಳಗೂ ಹೆಬ್ಬಾಗಿಲಿನ ಒಳಗಡೆಯಿಂದ ಒಳಗಣ ಪ್ರಾಕಾರದ ಹೊರಗಡೆಯ ತನಕ ಅಳೆಯಲು ಐವತ್ತು ಮೀಟರ್ ಇತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವನು ಕೆಳಗಿನ ಬಾಗಿಲಿನ ಮುಂದುಗಡೆಯಿಂದ ಒಳಗಿನ ಅಂಗಳದ ಹೊರಗಡೆಯವರೆಗೂ ಪೂರ್ವಕ್ಕೂ ಉತ್ತರಕ್ಕೂ ಇರುವ ಅಗಲವನ್ನು ಸುಮಾರು ಐವತ್ತಮೂರು ಮೀಟರ್ ಎಂದು ಅಳೆದನು.