Ezekiel 40:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದರ್ಶನವೊಂದರಲ್ಲಿ ಯೆಹೋವನು ನನ್ನನ್ನು ಇಸ್ರೇಲ್ ದೇಶಕ್ಕೆ ಒಯ್ದನು. ಆತನು ನನ್ನನ್ನು ಘಹಳ ಉನ್ನತ ಪರ್ವತದ ಬಳಿ ಇರಿಸಿದನು. ನನೆಐದುರಿಗಿದ್ದ ಆ ಪರ್ವತ ಒಂದು ನಗರದಂತೆ ಕಂಡಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು ನನ್ನನ್ನು ಇಸ್ರಾಯೇಲ್ ದೇಶಕ್ಕೆ ತಂದು, ಅತ್ಯುನ್ನತ ಪರ್ವತದ ಮೇಲೆ ಇಳಿಸಿದನೆಂದು ದೇವರ ದರ್ಶನದಲ್ಲಿ ನನಗೆ ಕಂಡುಬಂದಿತು. ದಕ್ಷಿಣದ ಕಡೆ ಆ ಪರ್ವತದ ಮೇಲೆ ಪಟ್ಟಣದಂತಿರುವ ಕಟ್ಟಡಗಳು ಕಾಣಿಸಿತು.
Kannada BSI Bible 2016
ದೇವರ ದರ್ಶನಗಳಲ್ಲಿ ಆತನು ನನ್ನನ್ನು ಇಸ್ರಾಯೇಲ್‌ ದೇಶಕ್ಕೆ ತಂದು ಅತಿ ಎತ್ತರವಾದ ಪರ್ವತಗಳ ಮೇಲೆ ನನ್ನನ್ನು ಇರಿಸಿದನು, ಅದರ ಮೇಲೆ ದಕ್ಷಿಣದ ಕಡೆಯಲ್ಲಿ ಪಟ್ಟಣವು ಕಟ್ಟಿರುವಂತಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆತನು ನನ್ನನ್ನು ಇಸ್ರಾಯೇಲ್ ದೇಶಕ್ಕೆ ತಂದು ಅತ್ಯುನ್ನತ ಪರ್ವತದ ಮೇಲೆ ಇಳಿಸಿದನೆಂದು ದೇವರ ದರ್ಶನದಲ್ಲಿ ನನಗೆ ಕಂಡುಬಂತು. ತೆಂಕಲಕಡೆಯಲ್ಲಿ ಆ ಪರ್ವತದ ಮೇಲೆ ಪಟ್ಟಣದಂತಿರುವ ಒಂದು ಕಟ್ಟಡವು ಕಾಣಿಸಿತು.
Kannada Bible (KNCL) BSI 2016
ನನ್ನನ್ನು ಇಸ್ರಯೇಲ್ ನಾಡಿಗೆ ತಂದು, ಅತ್ಯುನ್ನತ ಪರ್ವತದ ಮೇಲೆ ಇಳಿಸಿದರೆಂದು ದೇವರ ದರ್ಶನದಲ್ಲಿ ನನಗೆ ಕಂಡುಬಂದಿತು. ದಕ್ಷಿಣ ಕಡೆಯಲ್ಲಿ ಆ ಪರ್ವತದ ಮೇಲೆ ಪಟ್ಟಣದಂತಿರುವ ಒಂದು ಕಟ್ಟಡ ಕಾಣಿಸಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದೇವರ ದರ್ಶನಗಳಲ್ಲಿ ಅವರು ನನ್ನನ್ನು ಇಸ್ರಾಯೇಲ್ ದೇಶಕ್ಕೆ ತಂದು ಅತಿ ಎತ್ತರವಾದ ಪರ್ವತಗಳ ಮೇಲೆ ನನ್ನನ್ನು ನಿಲ್ಲಿಸಿದರು. ಅದರ ಮೇಲೆ ದಕ್ಷಿಣದ ಕಡೆಯಲ್ಲಿ ಪಟ್ಟಣವು ಕಟ್ಟಿರುವಂತಿತ್ತು.