Ezekiel 40:23 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಪ್ರಾಕಾರದ ಹೊರಗೆ ಉತ್ತರದ ಪ್ರವೇಶ ದ್ವಾರದಿಂದ ಒಳಗಿನ ಪ್ರಾಕಾರಕ್ಕೆ ಹೋಗಲು ದ್ವಾರವಿತ್ತು. ಇದು ಪೂರ್ವದಲ್ಲಿದ್ದ ದ್ವಾರದಂತಿತ್ತು. ಅವನು ಒಳಗೋಡೆಯ ದ್ವಾರದಿಂದ ಹೊರಗೋಡೆಯ ದ್ವಾರದ ತನಕ ಅಳೆದಾಗ, ದ್ವಾರದಿಂದ ದ್ವಾರಕ್ಕೆ ನೂರು ಮೊಳವಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೊರಗಣ ಅಂಗಳದ ಉತ್ತರ ಮತ್ತು ಪೂರ್ವಕ್ಕಿರುವ ಹೆಬ್ಬಾಗಿಲುಗಳಿಗೆ ಎದುರಾಗಿ ಒಳಗಣ ಹೆಬ್ಬಾಗಿಲುಗಳು ಇದ್ದವು; ಒಂದು ಬಾಗಿಲಿನಿಂದ ಎದುರು ಬಾಗಿಲಿಗೆ ನೂರು ಮೊಳ ಅಳತೆ ಮಾಡಿದನು.
Kannada BSI Bible 2016
ಒಳಗಿನ ಅಂಗಳದ ಬಾಗಲು ಉತ್ತರ ಮತ್ತು ಪೂರ್ವಕ್ಕಿರುವ ಬಾಗಲಿಗೆ ಎದುರಾಗಿತ್ತು; ಅವನು ಬಾಗಲಿನಿಂದ ಬಾಗಲಿಗೆ ನೂರು ಮೊಳವೆಂದು ಅಳೆ ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
[ಹೊರಗಣ ಪ್ರಾಕಾರದ] ಬಡಗಣ ಮೂಡಣ ಹೆಬ್ಬಾಗಿಲುಗಳಿಗೆ ಎದುರಾಗಿ ಒಳಗಣ ಪ್ರಾಕಾರಕ್ಕೂ ಹೆಬ್ಬಾಗಿಲುಗಳು ಇದ್ದವು; ಒಂದು ಬಾಗಿಲಿಂದ ಎದುರು ಬಾಗಿಲಿಗೆ ನೂರು ಮೊಳ ಅಳೆದನು.
Kannada Bible (KNCL) BSI 2016
ಹೊರಗಣ ಪ್ರಾಕಾರದ ಬಡಗಣ ಮೂಡಣ ಹೆಬ್ಬಾಗಿಲುಗಳಿಗೆ ಎದುರಾಗಿ ಒಳಗಣ ಪ್ರಾಕಾರಕ್ಕೂ ಹೆಬ್ಬಾಗಿಲುಗಳು ಇದ್ದವು. ಒಂದು ಬಾಗಿಲಿನಿಂದ ಎದುರು ಬಾಗಿಲಿಗೆ ಐವತ್ತು ಮೀಟರ್ ಅಳೆದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಒಳಗಿನ ಅಂಗಳದ ಬಾಗಿಲು ಉತ್ತರ ಮತ್ತು ಪೂರ್ವಕ್ಕಿರುವ ಬಾಗಿಲಿಗೆ ಎದುರಾಗಿತ್ತು. ಅವನು ಬಾಗಿಲಿನಿಂದ ಬಾಗಿಲಿಗೆ ಸುಮಾರು ಐವತ್ತಮೂರು ಮೀಟರ್ ಎಂದು ಅಳೆದನು.