Ezekiel 40:26 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅದರ ಮೇಲೆ ಏರಲು ಏಳು ಮೆಟ್ಟಲುಗಳಿದ್ದವು. ಅದರ ಕೈಸಾಲೆಯು ದ್ವಾರದ ಒಳಗಿನ ಭಾಗದಲ್ಲಿತ್ತು. ಅದರ ಅಕ್ಕಪಕ್ಕದ ಗೋಡೆಗಳಲ್ಲಿ ಖರ್ಜೂರ ವೃಕ್ಷದ ಕೆತ್ತನೆ ಕೆಲಸವಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಲ್ಲಿ ಹತ್ತುವುದಕ್ಕೆ ಏಳು ಮೆಟ್ಟಿಲುಗಳಿದ್ದವು. ಕೈಸಾಲೆಯ ಎರಡು ಪಕ್ಕದ ಕಂಬಗಳಲ್ಲಿ ಖರ್ಜೂರ ಮರಗಳ ಚಿತ್ರಗಳಿದ್ದವು.
Kannada BSI Bible 2016
ಅದಕ್ಕೆ ಏರುವ ಹಾಗೆ ಏಳು ಮೆಟ್ಟಲುಗಳು ಇದ್ದವು. ಅದರ ಕೈಸಾಲೆಗಳು ಅದರ ಮುಂದೆ ಇದ್ದವು; ಅದರ ಕಂಬಗಳ ಮೇಲೆ ಆ ಕಡೆಗೂ ಈ ಕಡೆಗೂ ಒಂದೊಂದು ಖರ್ಜೂರದ ಮರವಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಲ್ಲಿ ಹತ್ತುವದಕ್ಕೆ ಏಳು ಮೆಟ್ಲುಗಳಿದ್ದವು; ಕೈಸಾಲೆಯು ಒಳಗಡೆಯಿತ್ತು; ಕೈಸಾಲೆಯ ಎದುರುಬದುರಿನ ನಿಲವು ಕಂಬಗಳಲ್ಲಿ ಖರ್ಜೂರ ವೃಕ್ಷಗಳು ಚಿತ್ರಿತವಾಗಿದ್ದವು.
Kannada Bible (KNCL) BSI 2016
ಅಲ್ಲಿ ಹತ್ತುವುದಕ್ಕೆ ಏಳು ಮೆಟ್ಟಲುಗಳಿದ್ದವು; ಕೈಸಾಲೆ ಒಳಗಡೆಯಿತ್ತು; ಕೈಸಾಲೆಯ ಎದುರು ಬದುರಿನ ನಿಲವುಕಂಬಗಳಲ್ಲಿ ಖರ್ಜೂರ ವೃಕ್ಷಗಳು ಚಿತ್ರಿತವಾಗಿದ್ದವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದಕ್ಕೆ ಏರುವ ಹಾಗೆ ಏಳೂ ಮೆಟ್ಟಲುಗಳು ಇದ್ದವು. ಅದರ ಕೈಸಾಲೆಗಳು ಅದರ ಮುಂದೆ ಇದ್ದವು. ಅದರ ಕಂಬಗಳು ಮೇಲೆ ಆ ಕಡೆಗೂ ಈ ಕಡೆಗೂ ಒಂದೊಂದು ಖರ್ಜೂರದ ಮರದಿಂದ ಅಲಂಕರಿಸಲಾಗಿತ್ತು.