Ezekiel 40:29 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅದರ ಕೋಣೆಗಳು, ಅಕ್ಕಪಕ್ಕದ ಗೋಡೆಗಳು, ಕೈಸಾಲೆ ಎಲ್ಲವೂ ಬೇರೆ ಪ್ರವೇಶದ್ವಾರಗಳ ಪ್ರಕಾರವೇ ಅಳತೆಯಲ್ಲಿದ್ದವು. ದ್ವಾರದ ಸುತ್ತಲೂ ಕಿಟಕಿಗಳಿದ್ದವು. ಆ ದ್ವಾರವು ಐವತ್ತು ಮೊಳ ಉದ್ದ ಇಪ್ಪತ್ತೈದು ಮೊಳ ಅಗಲವಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದರಲ್ಲಿಯೂ, ಅದರ ಕೈಸಾಲೆಯಲ್ಲಿಯೂ ಕಿಟಕಿಗಳು ಎಲ್ಲಾ ಕಡೆಯಿದ್ದವು; ಹೆಬ್ಬಾಗಿಲಿನ ಉದ್ದ ಐವತ್ತು ಮೊಳ ಮತ್ತು ಅಗಲ ಇಪ್ಪತ್ತೈದು ಮೊಳವಾಗಿತ್ತು.
Kannada BSI Bible 2016
ಅಲ್ಲಿನ ಆ ಚಿಕ್ಕ ಕೊಠಡಿಗಳನ್ನೂ ಅದರ ಕಂಬ ಗಳನ್ನೂ ಕಮಾನುಗಳನ್ನೂ ಈ ಅಳತೆಯ ಪ್ರಕಾರ ಅಳೆದನು. ಅದರಲ್ಲಿಯೂ ಅದರ ಸುತ್ತಲಿರುವ ಕಮಾ ನುಗಳಲ್ಲಿಯೂ ಕಿಟಕಿಗಳಿದ್ದವು ಅದರ ಉದ್ದ ಐವತ್ತು ಮೊಳ, ಅಗಲ ಇಪ್ಪತ್ತೈದು ಮೊಳ;
Kannada BSI JV (ಕನ್ನಡ ಸತ್ಯವೇದವು J.V. (BSI))
ಅದರಲ್ಲಿಯೂ ಅದರ ಕೈಸಾಲೆಯಲ್ಲಿಯೂ ಕಿಟಕಿಗಳು ಎಲ್ಲಾ ಕಡೆಯಿದ್ದವು; ಹೆಬ್ಬಾಗಿಲಿನ ಉದ್ದ ಐವತ್ತು ಮೊಳ, ಅಗಲ ಇಪ್ಪತ್ತೈದು ಮೊಳ.
Kannada Bible (KNCL) BSI 2016
ಅದರಲ್ಲಿಯೂ ಅದರ ಕೈಸಾಲೆಯಲ್ಲಿಯೂ ಕಿಟಕಿಗಳು ಎಲ್ಲ ಕಡೆಯಿದ್ದವು. ಹೆಬ್ಬಾಗಿಲಿನ ಉದ್ದ ಇಪ್ಪತ್ತೈದು ಮೀಟರ್, ಅಗಲ ಹನ್ನೆರಡುವರೆ ಮೀಟರ್.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅಲ್ಲಿನ ಕೋಣೆಯ ಉಪವಿಭಾಗಗಳನ್ನೂ ಅದರ ಕಂಬಗಳನ್ನೂ ಅದರ ಪಡಸಾಲೆಗಳನ್ನೂ ಈ ಅಳತೆಯ ಪ್ರಕಾರ ಅಳೆದನು. ಅದರಲ್ಲಿಯೂ ಸುತ್ತಲೂ ಇರುವ ಅದರ ಪಡಸಾಲೆಗಳಲ್ಲಿಯೂ ಕಿಟಕಿಗಳಿದ್ದವು. ಅದರ ಉದ್ದವು ಸುಮಾರು ಇಪ್ಪತ್ತೈದು ಮೀಟರ್ ಮತ್ತು ಅದರ ಅಗಲವು ಸುಮಾರು ಹದಿಮೂರು ಮೀಟರ್ ಇತ್ತು.