Ezekiel 40:43 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಈ ಸ್ಥಳದ ಗೋಡೆಯಲ್ಲಿ ಸುತ್ತಲೂ ಮೂರು ಇಂಚು ಉದ್ದದ ಮಾಂಸವನ್ನು ಸಿಕ್ಕಿಸುವ ಕೊಂಡಿಗಳಿದ್ದವು. ಯಜ್ಞದ ಮಾಂಸವು ಈ ಮೇಜುಗಳ ಮೇಲಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಒಳಗೆ, ಸುತ್ತಲು ಕೈ ಅಗಲದಷ್ಟು ಕೊಂಡಿಗಳು ಜಡಿಯಲ್ಪಟ್ಟಿದ್ದವು. ನೈವೇದ್ಯ ಮಾಂಸವು ಪೀಠಗಳ ಮೇಲಿತ್ತು.
Kannada BSI Bible 2016
ಒಳಗೆ ಸುತ್ತಲಾಗಿ ಕೈ ಅಗಲದಷ್ಟು ಕೊಂಡಿಗಳು ಜಡಿಯಲ್ಪಟ್ಟಿದ್ದವು. ಮೇಜುಗಳ ಮೇಲೆ ಅರ್ಪಣೆಯ ಮಾಂಸವಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಂಚಿನಲ್ಲಿ ಹಿಡಿಯೆತ್ತರ ದಿಂಡುಕಟ್ಟಿತ್ತು; ನೈವೇದ್ಯಮಾಂಸವು ಪೀಠಗಳ ಮೇಲಿತ್ತು.
Kannada Bible (KNCL) BSI 2016
ಅಂಚಿನಲ್ಲಿ ಎಪ್ಪತ್ತೈದು ಮಿಲಿಮೀಟರ್ ದಿಂಡು ಕಟ್ಟಿತ್ತು; ನೈವೇದ್ಯ ಮಾಂಸವು ಪೀಠಗಳ ಮೇಲಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಒಳಗೆ ಸುತ್ತಲಾಗಿ ಅಂಗೈ ಅಗಲದಷ್ಟು ಕೊಂಡಿಗಳು ಜಡಿಯಲಾಗಿದ್ದವು. ಮೇಜುಗಳ ಮೇಲೆ ಬಲಿಯ ಮಾಂಸವಿತ್ತು.