Ezekiel 40:47 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವನು ಒಳಗಿನ ಪ್ರಾಕಾರವನ್ನು ಅಳತೆ ಮಾಡಿದನು. ಅದು ಚೌಕವಾಗಿದ್ದು ನೂರು ಮೊಳ ಉದ್ದ, ನೂರು ಮೊಳ ಅಗಲವಿತ್ತು. ಈ ಯಜ್ಞವೇದಿಕೆಯು ಆಲಯದ ಮುಂಭಾಗದಲ್ಲಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಮೇಲೆ ಅವನು ಅಂಗಳವನ್ನು ಅಳೆಯಲು, ಅದು ನೂರು ಮೊಳ ಉದ್ದವಾಗಿಯೂ, ನೂರು ಮೊಳ ಅಗಲವಾಗಿಯೂ ಚಚ್ಚೌಕವಾಗಿತ್ತು. ಯಜ್ಞವೇದಿಯು ದೇವಸ್ಥಾನದ ಮುಂದೆ ಇತ್ತು.
Kannada BSI Bible 2016
ಹೀಗೆ ಅವನು ಅಂಗಳವನ್ನು ಅಳೆದನು, ಅದರ ಉದ್ದ ನೂರು ಮೊಳ, ಅಗಲ ನೂರು ಮೊಳ, ಅದು ಚಚ್ಚೌಕವಾಗಿತ್ತು; ಆ ಯಜ್ಞವೇದಿಯು ಮನೆಯ ಮುಂದೆ ಇತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಮೇಲೆ ಅವನು ಪ್ರಾಕಾರವನ್ನು ಅಳೆಯಲು ಅದು ನೂರು ಮೊಳ ಉದ್ದವಾಗಿಯೂ ನೂರು ಮೊಳ ಅಗಲವಾಗಿಯೂ ಚಚ್ಚೌಕವಾಗಿತ್ತು; ಯಜ್ಞವೇದಿಯು ದೇವಸ್ಥಾನದ ಮುಂದೆ ಇತ್ತು.
Kannada Bible (KNCL) BSI 2016
ಆಮೇಲೆ ಅವನು ಪ್ರಾಕಾರವನ್ನು ಅಳೆಯಲು ಅದು ಐವತ್ತು ಮೀಟರ್ ಉದ್ದವಾಗಿಯೂ ಐವತ್ತು ಮೀಟರ್ ಅಗಲವಾಗಿಯೂ ಚಚ್ಚೌಕವಾಗಿತ್ತು; ಬಲಿಪೀಠವು ದೇವಸ್ಥಾನದ ಮುಂದೆ ಇತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೀಗೆ ಅವನು ಅಂಗಳವನ್ನು ಅಳೆದನು. ಅದರ ಉದ್ದವು ಸುಮಾರು ಐವತ್ತು ಮೀಟರ್, ಅಗಲವು ಸುಮಾರು ಐವತ್ತು ಮೀಟರ್ ಚಚ್ಚೌಕವಾಗಿತ್ತು. ಆ ಬಲಿಪೀಠವು ದೇವಾಲಯದ ಮುಂದೆ ಇತ್ತು.